ಕೀಟ ಕಚ್ಚಿ 8ನೇ ತರಗತಿ ವಿದ್ಯಾರ್ಥಿನಿ ದಾರುಣ ಮೃತ್ಯು

(ನ್ಯೂಸ್ ಕಡಬ)newskadaba.com ಪತ್ತನಂತಿಟ್ಟ, ಮಾ.07. ವಿಷಪೂರಿತ ಕೀಟ ಕಚ್ಚಿ ಪುಟ್ಟ ಬಾಲಕಿ ಮೃತ ಪಟ್ಟಿರುವ ದಾರುಣ ಘಟನೆ ಕೇರಳದ ಪತ್ತನಂತಿಟ್ಟದ ತಿರುವಲ್ಲಾದಲ್ಲಿ ನಡೆದಿದೆ. ಪೆರಿಂಗಾರ ಕೊಚಾರಿಮುಕ್ಕಂನ ಪನಾರ ಮನೆ ನಿವಾಸಿ ಅನೀಶ್ ಮತ್ತು ಶಾಂತಿ ಕೃಷ್ಣನ್ ದಂಪತಿಯ ಪುತ್ರಿ ಅಂಜಿತಾ ಅನೀಶ್ ಮೃತಪಟ್ಟ ಬಾಲಕಿ.

ಮಾ.5ರಂದು ಸಂಜೆ ಮನೆಯ ಸಮೀಪದ ಹೊಲದಲ್ಲಿ ಸ್ನೇಹಿತೆಯರೊಂದಿಗೆ ಆಟವಾಡುತ್ತಿದ್ದಾಗ ಕಿವಿಯ ಕೆಳಗೆ ಕೀಟವೊಂದು ಕಚ್ಚಿದೆ. ನೊಣದಂತಹ ಜೀವಿ ಕಚ್ಚಿರುವುದಾಗಿ ಬಾಲಕಿ ಮನೆಯಲ್ಲಿ ಹೇಳಿದ್ದಾಳೆ. ಕೀಟ ಕಚ್ಚಿದ 30 ನಿಮಿಷದಲ್ಲಿ ಬಾಲಕಿಯ ಇಡೀ ದೇಹದಲ್ಲಿ ತುರಿಕೆ ಆರಂಭವಾಗಿದೆ. ಕೂಡಲೇ ಬಾಲಕಿಯನ್ನು ತಿರುವಲ್ಲಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗುವಷ್ಟರಲ್ಲಿ ಬಾಲಕಿ ಕುಸಿದು ಬಿದ್ದಿದ್ದಾಳೆ.

Also Read  ಯುವಕನ ಕೊಲೆಯತ್ನ ಪ್ರಕರಣ- ಆರೋಪಿಯ ಬಂಧನ

error: Content is protected !!
Scroll to Top