ಸತತ 2ನೇ ಬಾರಿಗೆ ಮೇಘಾಲಯದ ಸಿಎಂ ಆಗಿ ಸಂಗ್ಮಾ ಕಾನ್ರಾಡ್ ಪ್ರಮಾಣ ವಚನ ಸ್ವೀಕಾರ

(ನ್ಯೂಸ್ ಕಡಬ) newskadaba.com ಶಿಲ್ಲಾಂಗ್, ಮಾ. 07. ಸತತ ಎರಡನೇ ಬಾರಿಗೆ ಮೇಘಾಲಯದ ಮುಖ್ಯಮಂತ್ರಿಯಾಗಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಸಂಗ್ಮಾ ಕಾನ್ರಾಡ್ ಶಿಲ್ಲಾಂಗ್‌ನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸಿದ್ದರು.

ಎನ್‌ಸಿಪಿಯ ಪ್ರೆಸ್ಟೋನ್ ಟೈನ್ಸಾಂಗ್ ಮತ್ತು ಬಿಜೆಪಿಯ ಅಲೆಕ್ಸಾಂಡರ್ ಲಾಲೂ ಹೆಕ್ ಸೇರಿದಂತೆ 12 ಮಂದಿಯನ್ನೊಳಗೊಂಡ ಸಚಿವ ಸಂಪುಟದ ಸದಸ್ಯರಿಗೆ ಮೇಘಾಲಯ ರಾಜ್ಯಪಾಲ ಫಾಗು ಚೌಹಾಣ್ ಅವರು ಪ್ರಮಾಣ ವಚನ ಬೋಧಿಸಿದರು.

Also Read  ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ 13 ಮಂದಿ ಸಾವು..!   ➤ಇನ್ನು ಕೆಲವರು ಆಸ್ಪತ್ರೆಗೆ ದಾಖಲು!

 

error: Content is protected !!
Scroll to Top