ಅಕ್ರಮ ಮರ ಸಾಗಾಟ ➤ ಲಾರಿ ಸಹಿತ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಸಂಪಾಜೆ, ಮಾ. 07. ಹೆಬ್ಬಲಸು ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಂಪಾಜೆ ವಲಯ ವ್ಯಾಪ್ತಿಯ ಅರಣ್ಯ ತನಿಖಾ ಠಾಣೆ ಸಂಪಾಜೆಯಲ್ಲಿ ಬಂಧಿಸಿದ ಘಟನೆ ವರದಿಯಾಗಿದೆ.

 

ಬಂಧಿತನನ್ನು ಮುಹಮ್ಮದ್ ಸಪ್ವಾನ್ ಎಂದು ಗುರುತಿಸಲಾಗಿದೆ. ಈತ ಮಡಿಕೇರಿಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಹೆಬ್ಬಲಸು ಮರದ ತುಂಡುಗಳನ್ನು ಸಾಗಿಸುತ್ತಿದ್ದು, ಆತನಿಂದ ವಾಹನ ಹಾಗೂ 12 ಹೆಬ್ಬಲಸು ಮರದ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪೂವಯ್ಯ.ಎ.ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೊಯಿದಿನ್ ಬಾಷಾ ಹಾಗೂ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಬಸವರಾಜಪ್ಪ ಉಪ ವಲಯ ಅರಣ್ಯಾಧಿಕಾರಿ ಪತ್ತೆ ಹಚ್ಚಿರುತ್ತಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ವಿನಯಕೃಷ್ಣ.ಎಂ.ಸಿ., ಗಸ್ತು ಅರಣ್ಯಪಾಲಕರಾದ ನಾಗರಾಜ್.ಎಸ್, ಕಾರ್ತಿಕ್ ಡಿ., ವಾಹನ ಚಾಲಕರಾದ ಶಿವಪ್ರಸಾದ್, ಮನೋಜ್‌ ಹಾಗೂ ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Also Read   ಖಾಸಗಿ ಬಸ್ಸಿಗೆ ಲಾರಿ ಢಿಕ್ಕಿ                ವಿದ್ಯಾರ್ಥಿ ಗಂಭೀರ, ಹಲವರಿಗೆ ಗಾಯ    

error: Content is protected !!
Scroll to Top