ಅಮೇರಿಕ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ಮಹಿಳೆ ನೇಮಕ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಮಾ. 07. ಅಮೆರಿಕದ ಮಸಷುಚೆಟ್ಸ್ ರಾಜ್ಯದ ಜಿಲ್ಲಾ ನ್ಯಾಯಾಲಯದ ಪ್ರಥಮ ನ್ಯಾಯಾಧೀಶೆಯಾಗಿ ಭಾರತೀಯ ಅಮೆರಿಕನ್ ಮಹಿಳೆ ತೇಜಲ್ ಮೆಹ್ತಾರನ್ನು ನೇಮಕಗೊಳಿಸಿರುವುದಾಗಿ ವರದಿಯಾಗಿದೆ.

ಅಯೇರ್ ಜಿಲ್ಲಾನ್ಯಾಯಾಲಯದ ಪ್ರಥಮ ನ್ಯಾಯಾಧೀಶೆಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಇದೇ ನ್ಯಾಯಾಲಯದಲ್ಲಿ ಸಹಾಯಕ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸಿದ್ದ ಇವರು ಪದೋನ್ನತಿಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಗುರುವಾರದಂದು ಅವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ತೇಜಲ್ ಮೆಹ್ತಾ ಅಮೆರಿಕದ ಜಿಲ್ಲಾನ್ಯಾಯಾಲಯದ ನ್ಯಾಯಾಧೀಶೆಯಾಗಿ ನೇಮಕಗೊಂಡ ಪ್ರಪ್ರಥಮ ಭಾರತೀಯ ಅಮೆರಿಕನ್ ನ್ಯಾಯಾಧೀಶೆಯಾಗಿದ್ದಾರೆ.

Also Read  ಈ 9 ರಾಶಿಯವರಿಗೆ ,ಮದುವೆ ಯೋಗ, ವ್ಯಾಪಾರ ದಾಂಪತ್ಯದಲ್ಲಿ ಹೊಂದಾಣಿಕೆ, ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ

error: Content is protected !!
Scroll to Top