(ನ್ಯೂಸ್ ಕಡಬ)newskadaba.com ಗಾಜಿಯಾಬಾದ್, ಮಾ.07. 16 ವರ್ಷಗಳ ಹಿಂದೆ ಉತ್ತರ ಪ್ರದೇಶದ ಇಟಾಹ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ವಿಶೇಷ ಸಿಬಿಐ ಕೋರ್ಟ್ ಅಂದಿನ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಒಂಬತ್ತು ಪೊಲೀಸರು ತಪ್ಪಿತಸ್ಥರು ಎಂದು ಮಂಗಳವಾರ ತೀರ್ಪು ನೀಡಿದೆ.
ಮಾಜಿ ಠಾಣಾಧಿಕಾರಿ ಪವನ್ ಸಿಂಗ್, ಪಾಲ್ ಸಿಂಗ್ ತೇನ್ವಾ, ರಾಜೇಂದ್ರ ಪ್ರಸಾದ್, ಸರ್ನಾಮ್ ಸಿಂಗ್ ಮತ್ತು ಮೊಹ್ಕಮ್ ಸಿಂಗ್ ಸೇರಿದಂತೆ ಎಲ್ಲಾ ಒಂಬತ್ತು ಅಪರಾಧಿಗಳಿಗೆ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ನ್ಯಾಯಾಲಯವು ಪ್ರತಿಯೊಬ್ಬ ಅಪರಾಧಿಗೂ 30,000 ರೂಪಾಯಿ ದಂಡ ವಿಧಿಸಿದೆ.