ಬಂಟ್ವಾಳ: ಬೆಂಕಿ ಆಕಸ್ಮಿಕ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 07. ಮನೆಯೊಂದರಲ್ಲಿ ಆಕಸ್ನಿಕ ಬೆಂಕಿ ಕಾಣಿಸಿಕೊಂಡು ಅಡುಗೆ ಕೋಣೆ ಹಾಗೂ ದಾಸ್ತಾನು ಕೊಠಡಿ ಸಂಪೂರ್ಣ ಸುಟ್ಟು ಹೋದ ಘಟನೆ ಇಲ್ಲಿನ ಜಕ್ರಿಬೆಟ್ಟು ಸಮೀಪದ ಚಂಡ್ತಿಮಾರು ಎಂಬಲ್ಲಿ ಸೊಮವಾರದಂದು ತಡರಾತ್ರಿ ನಡೆದಿದೆ.

ಚಂಡ್ತಿಮಾರ್ ನಿವಾಸಿ ಮೋನಪ್ಪ ಪೂಜಾರಿ ಎಂವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಕಸ್ಮಿಕವಾಗಿ ಬೆಂಕಿ ತಗಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Also Read  ಕಡಲ ತೀರ ತ್ಯಾಜ್ಯಗುಂಡಿಯಲ್ಲ ➤ ಡಾ|| ಚೂಂತಾರು

error: Content is protected !!
Scroll to Top