ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆದ ಕರ್ನಾಟಕ    ➤  25 ಲಕ್ಷ ರೂ. ನಗದು ಘೋಷಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.07. 54 ವರ್ಷ​ಗಳ ಬಳಿ​ಕ ಪ್ರತಿ​ಷ್ಠಿತ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆದ ಕರ್ನಾಟಕ ತಂಡಕ್ಕೆ ಕರ್ನಾ​ಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆ​ಎ​ಸ್‌​ಎ​ಫ್‌​ಎ) 25 ಲಕ್ಷ ರು. ನಗದು ಬಹು​ಮಾನ ಘೋಷಿ​ಸಿದೆ ಎನ್ನಲಾಗಿದೆ.

ಕೆಎ​ಸ್‌​ಎ​ಫ್‌ಎ ಫುಟ್ಬಾಲ್‌ ಕ್ರೀಡಾಂಗ​ಣ​ದಲ್ಲಿ ನಡೆದ ಆಟ​ಗಾ​ರ​ರಿಗೆ ಸನ್ಮಾನ, ಟ್ರೋಫಿ ಪರೇಡ್‌ ಕಾರ್ಯಕ್ರಮ​ದಲ್ಲಿ ಮಾತ​ನಾ​ಡಿದ ಕೆಎ​ಸ್‌​ಎಫ್‌ಎ ಅಧ್ಯಕ್ಷ ಎನ್‌.​ಎ.​ಹ್ಯಾ​ರಿಸ್‌, ‘ರಾಜ್ಯದ ಆಟ​ಗಾ​ರರು ಈ ಬಾರಿ ಐತಿ​ಹಾ​ಸಿಕ ಸಾಧನೆ ಮಾಡಿ​ದ್ದಾರೆ. ದೇಶದ ಫುಟ್ಬಾ​ಲ್‌​ನಲ್ಲಿ ನಮ್ಮ ತಂಡ ಹೊಸ ಚರಿತ್ರೆ ಸೃಷ್ಟಿ​ಸಿದೆ. ಹೀಗಾಗಿ ತಂಡಕ್ಕೆ 25 ಲಕ್ಷ ರು. ಬಹು​ಮಾನ ಘೋಷಿ​ಸು​ತ್ತಿ​ದ್ದೇವೆ. ಮುಖ್ಯ​ಮಂತ್ರಿ​ ಅವರನ್ನು ಭೇಟಿ​ಯಾಗಿ ಸರ್ಕಾ​ರದ ಕಡೆ​ಯಿಂದಲೂ ಬಹು​ಮಾನ ಘೋಷಿ​ಸಲು ಮನವಿ ಮಾಡು​ತ್ತೇ​ನೆ’ ಎಂದರು.

Also Read  ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಕಾರ ಮಳೆ

error: Content is protected !!
Scroll to Top