ಮಾಡದ ತಪ್ಪಿಗೆ ದಲಿತ ಯುವ ಹೋರಾಟಗಾರನಿಗೆ ಶಿಕ್ಷೆ ➤ ಮನನೊಂದು ಆತ್ಮಹತ್ಯೆ ಗೆ ಯತ್ನ

(ನ್ಯೂಸ್ ಕಡಬ)newskadaba.com ಕೋಲಾರ, ಮಾ.07. ಡೆತ್ನೋಟ್ ಬರೆದಿಟ್ಟು ದಲಿತ ಯುವ ಹೋರಾಟಗಾರನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ದಲಿತ ಹೋರಾಟಗಾರ ಕೆ.ಎಂ.ಸಂದೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಂದೇಶ್ರನ್ನು ಗೆಳೆಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ದಲಿತ ಯುವತಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಮುಂದಾಗಿದ್ದ ಕೆ.ಎಂ.ಸಂದೇಶ್ರ ಮೇಲೆ ಪ್ರಕರಣವನ್ನು ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು ಎನ್ನಲಾಗಿದೆ.


ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದ ಮೇಲೆ ತಾನು ಮಾಡದ ತಪ್ಪಿಗೆ ಆಗಿರುವ ಶಿಕ್ಷೆಯಿಂದ ಅಪಮಾನ ತಾಳಲಾರದೆ ತಾವು ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

Also Read  ಉಪ್ಪಿನಂಗಡಿ: ಹಗಲು ಹೊತ್ತಿನಲ್ಲಿ ಜವಳಿ ಅಂಗಡಿಯಿಂದ ಜರ್ಕೀನ್ ಕದ್ದ ► ರಾತ್ರಿಯಲ್ಲಿ ಅದೇ ಜರ್ಕೀನ್ ತೊಟ್ಟು ಜವಳಿ ಅಂಗಡಿಯ ಮಾಲಕರಲ್ಲಿ ಲಿಫ್ಟ್ ಕೇಳಿದ ► ಕೊನೆಗೇನಾಯ್ತು ಗೊತ್ತೇ...?? ಸ್ವಾರಸ್ಯಕರ ಘಟನೆ..!!

 

error: Content is protected !!
Scroll to Top