4 ತಿಂಗಳ ಮಗುವಿಗೆ ಲೈಂಗಿಕ ಹಲ್ಲೆ ➤ ಅಪರಾಧಿಗೆ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 07. ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಅಪರಾಧಿ ಮರೋಳಿಯ ವಿನೋದ್‌ ಎಂಬಾತನಿಗೆ ಮಂಗಳೂರಿನ ನ್ಯಾಯಾಲಯವು ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

2017ರ ಮೇ ತಿಂಗಳಿನಲ್ಲಿ ಮಗುವಿನ ಪೋಷಕರು ಕೆಲಸಕ್ಕೆ ಹೋಗುವಾಗ ಅವರ ಮಗುವನ್ನು ನೆರೆಮನೆಯಲ್ಲಿ ಬಿಟ್ಟು ಹೋಗಿದ್ದರು. ಇದನ್ನೇ ನೆಪವಾಗಿರಿಸಿ ಅದೇ ಪರಿಸರದ ವಿನೋದ್‌ ಎಂಬಾತ ಮಗುವನ್ನು ಆತನ ಮನೆಗೆ ಎತ್ತಿಕೊಂಡು ಹೋಗಿ ಲೈಂಗಿಕ ಹಲ್ಲೆ ನಡೆಸಿದ್ದ. ಮಗು ಕೂಗಿಕೊಂಡಾಗ ನೆರೆಮನೆಯವರು ಓಡಿ ಬಂದಿದ್ದು, ಈ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ರವಿ ನಾಯ್ಕ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ಟಿಎಸ್‌ಸಿ 2 (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಪೋಕ್ಸೋ ಕಲಂ 8ರಡಿ 3 ವರ್ಷ ಜೈಲು ಹಾಗೂ 50,000 ರೂ. ದಂಡ ವಿಧಿಸಿದ್ದರು. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 4 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ಮಾ. 4ರಂದು ತೀರ್ಪು ನೀಡಿದ್ದಾರೆ.

Also Read  "ಅನ್ಯಾಯ ದಲಿತರಿಗೆ ಆಗಲಿ, ಸಾಮಾನ್ಯರಿಗೆ ಆಗಲಿ ಅದು ಅನ್ಯಾಯವೇ ಸರಿ" ➤ ಕಡಬದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಂಗಾರ

error: Content is protected !!
Scroll to Top