ಹೋಳಿ ಹಬ್ಬ- ಪ್ರಾಣಿಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು ಸಲಹೆ

(ನ್ಯೂಸ್ ಕಡಬ) newskadaba.com ಕಡಬ, ಮಾ. 07. ರಾಜ್ಯಾದ್ಯಂತ ಇದೇ ಮಾ. 08ರಂದು ಹೋಳಿ ಹಬ್ಬ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಪ್ರಮುಖ ಆಕರ್ಷಣೆ ಬಣ್ಣ ಎರಚುವುದು. ಬಣ್ಣ ಎರಚುವ ಸಮಯದಲ್ಲಿ ಮೂಕ ಪ್ರಾಣಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಬಣ್ಣಗಳ ಹಾನಿಕಾರಕ ಪರಿಣಾಮಗಳಿಗೆ ಒಳಪಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಬ್ಬದ ಸಂಭ್ರಮದ ಆಚರಣೆಯ ಜತೆಗೆ ಮುಗ್ದ ಪ್ರಾಣಿಗಳ ಸುರಕ್ಷತೆ ಮತ್ತು ಅವುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿರುತ್ತದೆ. ಆ ಕಾರಣ ಸಾರ್ವಜನಿಕರು ಹೋಳಿ ಹಬ್ಬದ ಅಚರಣೆ ಸಮಯದಲ್ಲಿ ಮೂಕ ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು ಹಾಗೂ ಪ್ರಾಣಿಗಳ ಮೇಲೆ ಬಣ್ಣ ಎರಚುವುದು ಕಂಡುಬಂದಲ್ಲಿ ಪ್ರಾಣಿಗಳ ದೌರ್ಜನ್ಯ ತಡೆ ಕಾಯಿದೆ 1960 ಸೆಕ್ಷನ್ 11ರ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಸದಸ್ಯ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ತಲೆಮರೆಸಿಕೊಂಡಿದ್ದ ಹಳೆಯ ಪ್ರಕರಣಗಳ ಆರೋಪಿ ಸೆರೆ

 

error: Content is protected !!
Scroll to Top