ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸರಸ್ವತೀ ವಿದ್ಯಾಲಯದಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ➤ ಮಾನವ ಕುಲಕ್ಕೆ ವಿಜ್ಞಾನ ಆಶೀರ್ವಾದ- ಪಿ.ಎನ್.ಭಟ್

(ನ್ಯೂಸ್ ಕಡಬ) newskadaba.com ಕಡಬ, ಮಾ. 07. ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಹನುಮಾನ್‍ನಗರ ಕೇವಳ ಇಲ್ಲಿ ಮಾರ್ಚ್ 6ರಂದು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಅನ್ವೇಷಣೆ 2023 ವಿಜ್ಞಾನ ಮಾದರಿ ಪ್ರದರ್ಶನ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದ ನಿವೃತ್ತ ವಿಜ್ಞಾನ ಶಿಕ್ಷಕರು, ರಾಷ್ಟ್ರ ಪ್ರಶಸ್ತಿ ವಿಜೇತರಾದ ಶ್ರೀ ಪುರಂದರ ನಾರಾಯಣ ಭಟ್ (ಪಿ.ಎನ್.ಭಟ್) ಆಗಮಿಸಿ ಮಾನವ ಕುಲಕ್ಕೆ ವಿಜ್ಞಾನ ಆಶೀರ್ವಾದ ಸುಖಕರ, ಆರೋಗ್ಯಕರ ಜೀವನಕ್ಕೆ ವಿಜ್ಞಾನ ಅಗತ್ಯ. ಸ್ನಾಯು ಸಂವೇದಿ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಇಂತಹ ವಿಜ್ಞಾನವನ್ನು ನಿಜ ಜೀವನದಲ್ಲಿ ಬಳಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸರಸ್ವತೀ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಶ್ರೀ ವೆಂಕಟ್ರಮಣರಾವ್ ಮಂಕುಡೆ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎ ಸೀತಾರಾಮ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರ್ಕಿಂಗ್, ನಾನ್‍ವರ್ಕಿಂಗ್ ಮಾದರಿಗಳು ಹಾಗೂ ರಂಗೋಲಿ ಸ್ಪರ್ಧೆಗಳು ವಿದ್ಯಾರ್ಥಿಗಳಿಂದ ಅದ್ಭುತವಾಗಿ ಪ್ರದರ್ಶನಗೊಂಡಿತು. ವಿಜ್ಞಾನ ಮಾದರಿ ಪ್ರದರ್ಶನದ ತೀರ್ಪುಗಾರರಾಗಿ ಸರಸ್ವತೀ ವಿದ್ಯಾಲಯದ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಶ್ರೀಮತಿ ವಸಂತಿ ಹಾಗೂ ಶ್ರೀಮತಿ ಶ್ವೇತಾ ಸಹಕರಿಸಿದರು. ವೇದಿಕೆಯಲ್ಲಿ ಪ್ರೌಢವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಗೌಡ ಆರಿಗ, ವಿಜ್ಞಾನ ಶಿಕ್ಷಕರಾದ ಶ್ರೀಮತಿ ಸ್ವಾತಿ ಪಿ ಎನ್, ವಿದ್ಯಾರ್ಥಿ ಸಂಘದ ಉಪನಾಯಕ ಮನಿಶ್ ಆರ್ ವಿ ಸೌರಭ ವಿಜ್ಞಾನ ಸಂಘದ ಸದಸ್ಯರಾದ ವಿನೀತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಕ್ಷಾ ಕೆ ಬಿ 9ನೇ ತರಗತಿ ಸ್ವಾಗತಿಸಿ, ವಿನೀತ್ 9ನೇ ತರಗತಿ ವಂದಿಸಿದರು. ಶ್ರೇಯಾ ಬಿ 9ನೇ ತರಗತಿ ವಿದ್ಯಾರ್ಥಿನಿ ವಿಜೇತರ ಪಟ್ಟಿಯನ್ನು ವಾಚಿಸಿದರು. 9ನೇ ತರಗತಿ ವಿದ್ಯಾರ್ಥಿನಿ ಧೃತಿ ಪಿ ಸಿ ಕಾರ್ಯಕ್ರಮ ನಿರೂಪಿಸಿದರು.

Also Read  ನೆಲ್ಯಾಡಿ: ಪಿಎಫ್ಐ ವತಿಯಿಂದ ರಕ್ತದಾನ ಶಿಬಿರ

error: Content is protected !!
Scroll to Top