ಬಿಹಾರದಲ್ಲಿ ಬಾಂಬ್‌ ಸ್ಪೋಟ ಯತ್ನ ➤ ದಕ್ಷಿಣ ಕನ್ನಡದ ಹಲವೆಡೆ ಎನ್‌ಐಎ ದಾಳಿ

(ನ್ಯೂಸ್ ಕಡಬ) newskadaba.com. ಮಂಗಳೂರು.  ಬಿಹಾರದ ಪಟ್ನಾದಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಬಾಂಬ್‌ ಇರಿಸಲು ಯತ್ನಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್‌ ಐಎ ತಂಡ ಭಾನುವಾರ ಸಂಜೆ ಬಂಟ್ವಾಳ ತಾಲೂಕಿನ ನಂದಾವರದ ಕೆಲವೆಡೆ ಮತ್ತು ಪುತ್ತೂರಿನಲ್ಲಿ ದಾಳಿ ನಡೆಸಿದೆ.

ನಂದಾವರದ ಮೂವರ ಮನೆಗೆ ದಾಳಿ ನಡೆಸಿ ತೀವ್ರ ವಿಚಾರಣೆ ನಡೆಸಲಾಗಿದೆ. ಪಾಣೆಮಂಗಳೂರು ಮತ್ತು ಮೆಲ್ಕಾರಿನ ಸೈಬರ್‌ ಸೆಂಟರ್‌ಗಳಿಗೂ ದಾಳಿ ನಡೆಸಲಾಗಿದೆ. ಅಲ್ಲದೆ ಪುತ್ತೂರು ಬೆಟ್ಟಂಪಾಡಿ ಇರ್ದೆಯ ರಫೀಕ್‌ ಎಂಬಾತನನ್ನು ಬಂಧಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

Also Read  ಕಡಬ ಸರಸ್ವತೀ ವಿದ್ಯಾಲಯ ಶಿಕ್ಷಕರ ದಿನಾಚರಣೆ ►“ಸಾಧನಶ್ರೀ” ಪ್ರಶಸ್ತಿ ಪಡೆದ ಸಾಧಕರಿಗೆ ಗೌರವಾರ್ಪಣೆ

error: Content is protected !!
Scroll to Top