ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೊೖಲ ► ಸಬಳೂರು ಅಯೋಧ್ಯಾನಗರ ಶಾಖಾ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜ.02. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊೖಲ ಗ್ರಾಮದ ಸಬಳೂರು ಅಯೋಧ್ಯಾನಗರ ಶಾಖಾ ವಾರ್ಷಿಕೋತ್ಸವ ಕಾರ್ಯಕ್ರಮವು ಭಾನುವಾರ ಸಂಜೆ ಅಯೋಧ್ಯಾನಗರ ಶ್ರೀ ರಾಮ ಭಜನಾ ಮಂದಿರದ ಕ್ರೀಡಾಂಗಣದಲ್ಲಿ ನಡೆಯಿತು.

ಶಾರೀರಿಕ ಆಟೋಟಗಳ ಬಳಿಕ ನಡೆದ ಸಭೆಯಲ್ಲಿ ಭೌದ್ಧಿಕ್ ನೀಡಿದ ಆರ್ಎಸ್ಎಸ್ ಮುಖಂಡ ಆಲಂಕಾರು ಶ್ರೀ ಭಾರತಿ ಶಾಲಾ ಶಿಕ್ಷಕ ಯಧುಶ್ರೀ ಆನೆಗುಂಡಿ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಡೀ ವಿಶ್ವದಲ್ಲಿ ಶಾಖೆಗಳನ್ನು ಹೊಂದಿದ್ದು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೊಂದು ಸಾಂಸ್ಕೃತಿಕ ಸಂಘಟನೆಯಾಗಿದ್ದು, ದೇಶದ ಇತಿಹಾಸವನ್ನು ಸೃಷ್ಠಿಸಿ ಸಾರ್ವಭೌಮತ್ವವನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ. ಭಾರತದ ಗತವೈಭವವನ್ನು ಮರುಕಳಿಸಿ ವಿಶ್ವದಲ್ಲಿ ಭಾರತಕ್ಕೆ ಉನ್ನತ ಸ್ಥಾನಮಾನ ದೊರುಕುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ನಮ್ಮ ಸಂಘ ಏನೇ ಅಡೆತಡೆಗಳು ಬಂದರೂ ಅವುಗಳನ್ನು ಮೆಟ್ಟಿ ನಿಂತು ಬೆಳೆದು ಬಂದಿದೆ. ಸ್ವಾತಂತ್ರ್ಯ ಪುರ್ವದಿಂದಲೂ ಸಂಘದ ಮೇಲೆ ವಿರೋಧಿಗಳ ಗಧಾಪ್ರಹಾರ ಮಾಡುತ್ತಲೇ ಬಂದಿದ್ದಾರೆ. ಸಂಘದ ಕಾರ್ಯಕರ್ತರ ಉತ್ಸಾವವನ್ನು ಕುಗ್ಗಿಸಲು ಎಷ್ಟೇ ಷಡ್ಯಂತರ ನಡೆದರೂ ನಮ್ಮ ಕಾರ್ಯಕರ್ತರು ಬೆಳೆಯುತ್ತಲೇ ಬಂದಿದ್ದಾರೆ. ವಿಶ್ವಮಾನ್ಯ ಸಂಘಟೆಯಾಗುವಲ್ಲಿ ತಮ್ಮ ಪ್ರತಿಫಲಾಪೇಕ್ಷೆಯಿಲ್ಲದ ಪ್ರಾಮಾಣಿಕ ಸೇವೆ ಮಾಡುತ್ತಲೇ ಬಂದಿದ್ದಾರೆ. ಮುಂದೊಂದು ದಿನ ಭಾರತ ವಿಶ್ವಗುರುವಾಗುವಲ್ಲಿ ಸಂಘದ ಪತ್ರ ಬಹಳ ದೊಡ್ಡಗಾಗಿರುತ್ತದೆ ಎಂದರು. ಸಂಘದ ಕಾರ್ಯಕರ್ತರು ಸತ್ಸಂಗ, ಸಜ್ಜನರ ಸಹವಾಸದೊಂದಿಗೆ ನಮ್ಮ ದೇಶಕ್ಕಾಗಿ ಬಲಿದಾನಗೈದ ವೀರಪುರುಷರ ಆದರ್ಶವನ್ನು ಇಟ್ಟುಕೊಂಡು ಬದುಕು ನಡೆಸಿ ಈ ದೇಶದ ಋಣ ತೀರಿಸಬೇಕು, ಸಜ್ಜನ ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡಿರುವ ಭಾರತದ ಆತ್ಮಗಳಾದ ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಯಧುಶ್ರೀ ಹೇಳಿದರು.

Also Read  ಕೆಸಿಸಿ ಟ್ರಸ್ಟ್‌ನ ಪ್ರಥಮ ಪ್ರಾಂಚೈಸಿ ಮೀಟ್

ಸಂಘದ ಸಬಳೂರು ಶಾಖಾ ಶಿಕ್ಷಕ ನಿತಿನ್ ಕಡೆಂಬ್ಯಾಲ್ ಸ್ವಾಗತಸಿದರು. ಕಾರ್ಯಕರ್ತ ಚಿದಾನಂದ ಪಾನ್ಯಾಲ್ ವಂದಿಸಿದರು. ಉಮೇಶ್ ಬುಡಲೂರು ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top