➤ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ತಜ್ಞ ಸಮಾಲೋಚನೆ ಸಹ್ಯಾದ್ರಿಯ ಉಪನ್ಯಾಸಕರು ಆಯ್ಕೆ

(ನ್ಯೂಸ್ ಕಡಬ) newskadaba.com. ಮಂಗಳೂರು.  ದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 7ರಂದು ನಡೆಯುವ ತಜ್ಞ ಸಮಾಲೋಚನೆಗೆ ಸಂಪಂನ್ಮೂಲ ವ್ಯಕ್ತಿಗಳಾಗಿ ನಗರದ ಸಹ್ಯಾದ್ರಿ ಕಾಲೇಜ್ ಆಪ್ ಇಂಜಿನಿಯರಿಂಗ್ ಮತ್ತು ಮೆನೇಜ್ಮೆಂಟ್ ನಿಂದ ಡಾ. ವಿಶಾಲ್ ಸಮರ್ಥ ಮತ್ತು ಪ್ರೊ. ಪದ್ಮನಾಭ ಬಿ. ಆಯ್ಕೆಯಾಗಿದ್ದಾರೆ.

ಸಚಿವಾಲಯದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ವಿಭಾಗದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಆಲ್: ಲಿಂಗ ಸಮಾನತೆಯಲ್ಲಿ ಆವಿಷ್ಕಾರ ಮತ್ತು ತಂತ್ರಜ್ಞಾನ ಎಂಬ ವಿಷಯದ ಕುರಿತು ಇವರು ವಿಚಾರ ಮಂಡಿಸಲಿದ್ದಾರೆ.

ದೇಶದ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಸಲಿದ್ದಾರೆ. ಡಾ. ವಿಶಾಲ್ ಸಮರ್ಥ ಮತ್ತು ಪ್ರೊ. ಪದ್ಮನಾಭ ಬಿ. ಇವರು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ವಿಭಾಗದ ಅನುದಾನದಿಂದ ನಡೆಯುವ ಕಾರ್ಯಯೋಜನೆಯ ಪ್ರಧಾನ ಸಂಶೋಧಕಿ ಹಾಗೂ ಉಪ ಪ್ರಧಾನ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಯೋಜನೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಸುಮಾರು 165 ಮಹಿಳೆಯರು ವಿದ್ಯುತ್ ಮಗ್ಗ ತರಬೇತಿಯನ್ನು ನುರಿತ ತರಬೇತುಧಾರರಿಂದ ತರಬೇತಿ ಪಡೆದು ಸ್ವಂತ ಉದ್ದಿಮೆ ಆರಂಭಿಸಲಿದ್ದಾರೆ.

error: Content is protected !!
Scroll to Top