ಮಣಿಪಾಲ: 35 ಅಂತಸ್ತುಗಳ ಕಟ್ಟಡ ಏರಿದ ಜ್ಯೋತಿರಾಜ್.!

(ನ್ಯೂಸ್ ಕಡಬ)newskadaba.com ಉಡುಪಿ, ಮಾ .06. ಮಣಿಪಾಲದಲ್ಲಿರುವ 35 ಅಂತಸ್ತುಗಳ ರಾಯಲ್ ಕಟ್ಟಡವನ್ನು ಚಿತ್ರದುರ್ಗದ ಸಾಹಸಿ ಜ್ಯೋತಿ ರಾಜ್ (ಕೋತಿರಾಜ್) ಯಶಸ್ವಿಯಾಗಿ ಏರಿದ್ದು, 120 ಮೀಟರ್ ಎತ್ತರದ ಈ ಕಟ್ಟಡ ಇದುವರೆಗೂ ಜ್ಯೋತಿರಾಜ್ ಹತ್ತಿರುವ ಬಹು ಎತ್ತರದ ಕಟ್ಟಡವಾಗಿದೆ.

ಬೆಳಿಗ್ಗೆ 11.10ಕ್ಕೆ ಸುರಕ್ಷತಾ ಸಾಧನಗಳೊಂದಿಗೆ ಕಟ್ಟಡವನ್ನು ಹತ್ತಲು ಆರಂಭಿಸಿದ ಜ್ಯೋತಿರಾಜ್ 12.10ಕ್ಕೆ ತುತ್ತತುದಿಯನ್ನು ತಲುಪುತ್ತಿದ್ದಂತೆ ನೆರೆದಿದ್ದವರೆಲ್ಲ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದರು ಎನ್ನಲಾಗಿದೆ. ಬಹುಮಹಡಿ ಕಟ್ಟಡದ ತುದಿಯಲ್ಲಿ ಕನ್ನಡದ ಬಾವುಟ ಹಾರಿಸಿ ಸಂಭ್ರಮಿಸಿದರು.

Also Read  ಜಿಲ್ಲಾಡಳಿತದ ನಿಲುವಿಗೆ ಸೆಡ್ಡು ಹೊಡೆದ ಉಪ್ಪಿನಂಗಡಿಯ ವ್ಯಾಪಾರಸ್ಥರು ➤ ಪುಟ್ಪಾತ್ ನಲ್ಲಿ ವಸ್ತುಗಳನ್ನಿರಿಸಿ ಮಾರಾಟ

 

error: Content is protected !!
Scroll to Top