ಬಿಎಸ್.ವೈ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹಾರಿಬಂದ ಪ್ಲಾಸ್ಟಿಕ್ ಚೀಲಗಳು ➤ ಕೆಲಕಾಲ ಆತಂಕ ಸೃಷ್ಟಿ

(ನ್ಯೂಸ್ ಕಡಬ) newskadaba.com ಕಲಬುರ್ಗಿ, ಮಾ. 06. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ರವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪವಾಗಿರುವ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್​​ನಲ್ಲಿ ನಡೆದಿದೆ.

ಜೇವರ್ಗಿಯಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ರಥಯಾತ್ರೆ ಸಂಬಂಧ ಹೆಲಿಕಾಪ್ಟರ್​ ಮೂಲಕ ಬಂದ ಬಿಎಸ್​ ಯಡಿಯೂರಪ್ಪರವರ ಹೆಲಿಕಾಪ್ಟರ್ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​ನಲ್ಲಿ ಲ್ಯಾಂಡ್​​ ಆಗುವ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿದ್ದು, ತಕ್ಷಣ ಎಚ್ಚೆತ್ತ ಪೈಲಟ್‌ ಹೆಲಿಕಾಪ್ಟರ್​ನ್ನು ಲ್ಯಾಂಡ್​ ಮಾಡದೆ ಬೇರೆಡೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಹೆಲಿಪ್ಯಾಡ್ ಸುತ್ತ ಜಮೀನಿನಲ್ಲಿ ಹಾಕಲಾಗಿರೋ ಪ್ಲಾಸ್ಟಿಕ್ ಚೀಲಗಳನ್ನು ಹಾಕಿದ್ದರು. ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿವೆ. ಕೂಡಲೆ ಎಚ್ಚತ್ತ ಪೈಲೆಟ್ ಹೆಲಿಕಾಪ್ಟರ್​​ನ್ನು ಟೇಕ್​ ಆಫ್​​ ಮಾಡಿ, ನಂತರ ಒಂದೆರಡು ಸುತ್ತು ಹೆಲಿಕಾಪ್ಟರ್​ನ್ನು ಆಕಾಶದಲ್ಲಿ ಹಾರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ಲಾಸ್ಟಿಕ್ ಚೀಲಗಳನ್ನು ತೆರವುಗೊಳಿಸಿದ್ದಾರೆ. ಬಳಿಕ ಪೈಲೆಟ್ ಲ್ಯಾಂಡ್​ ಮಾಡಿದ್ದಾರೆ. ಹೆಲಿಕ್ಯಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ತೂರಿಬಂದಿದ್ದರಿಂದ ಅಧಿಕಾರಿಗಳು ಮತ್ತು ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.

Also Read  ರೈಲುಗಳ ಮುಖಾಮುಖಿ ಢಿಕ್ಕಿ; 26 ಮಂದಿ ದುರ್ಮರಣ

error: Content is protected !!
Scroll to Top