ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಿಯಾಯಿತಿ.!       ➤  ಚಾಲಕರ ವೇತನ ಬಳಸಿಕೊಂಡು ರೂ.33 ಲಕ್ಷ ದಂಡ ಕಟ್ಟಿದ BMTC

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಶೇ.50ರ ರಿಯಾಯಿತಿಯನ್ನು ನೀಡಿದ್ದು, ಸರ್ಕಾರದ ಈ ಆಫರ್’ನ್ನು ಬಿಎಂಟಿಸಿ ಕೂಡ ಬಳಕೆ ಮಾಡಿಕೊಂಡಿದೆ.

ನಗರದಲ್ಲಿ 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಬಿಎಂಟಿಸಿ ಚಾಲಕರು ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ. 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಪ್ರಕರಣಗಳು ಸೇರಿ ಒಟ್ಟು ದಂಡದ ಮೊತ್ತ 1 ಕೋಟಿ ರೂ.ಗೆ ತಲುಪಿದೆ. ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪ್ರಮುಖ ಪ್ರಕರಣಗಳಲ್ಲಿ ಒಟ್ಟು ದಂಡ 66 ಲಕ್ಷ ರೂಪಾಯಿ ಆಗಿದ್ದು, ಶೇ.50 ಆಫರ್ ಮೂಲಕ 33 ಲಕ್ಷ ರೂ. ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ ಪಾವತಿ ಮಾಡಿದೆ.

Also Read  ಫ್ಲೈಯಿಂಗ್​ ಸಿಖ್​ ಮಿಲ್ಕಾ ಸಿಂಗ್​ ನಿಧನ ➤ ಪ್ರಧಾನಿ ಸೇರಿದಂತೆ ಗಣ್ಯರಿಂದ ಸಂತಾಪ..!

 

error: Content is protected !!
Scroll to Top