ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಮಾಡಿ ಶಿಶುವನ್ನು ಕೊಂದ ಅಪ್ರಾಪ್ತೆ..!

(ನ್ಯೂಸ್ ಕಡಬ) newskadaba.com ನಾಗ್ಪುರ, ಮಾ. 06. ಶಂಕಿತ ಲೈಂಗಿಕ ಶೋಷಣೆಗೆ ಒಳಗಾಗಿದ್ದ ಅಪ್ರಾಪ್ತ ಯುವತಿಯೋರ್ವಳು ಯೂಟ್ಯೂಬ್‍ ನಲ್ಲಿ ವಿಡಿಯೊ ನೋಡಿ ಮನೆಯಲ್ಲೇ ಹೆರಿಗೆ ಮಾಡಿಕೊಂಡು, ನವಜಾತ ಶಿಶುವನ್ನು ಕೊಂದಿರುವ ಘಟನೆ ವರದಿಯಾಗಿದೆ.

 

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಂದ ಈ ಯುವತಿಯು ಲೈಂಗಿಕ ಶೋಷಣೆಗೆ ಒಳಗಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ತನಗೆ ಆರೋಗ್ಯ ಸಮಸ್ಯೆ ಇದೆ ಎಂದು ತಾಯಿಯ ಜೊತೆ ಹೇಳಿ, ಯುವತಿಯು ತಾನು ಗರ್ಭಿಣಿಯಾದ ವಿಚಾರವನ್ನು ಮುಚ್ಚಿಟ್ಟಿದ್ದಳು ಎಂದು ಹೇಳಲಾಗಿದೆ. ಅಂಬಝರಿ ಪ್ರದೇಶದ ನಿವಾಸಿಯಾದ ಈ ಯುವತಿ ರಹಸ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಮನೆಯಲ್ಲೇ ಯೂಟ್ಯೂಬ್ ಸಹಾಯದಿಂದ ಹೆರಿಗೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಳು ಎಂದು ಅಧಿಕಾರಿ ವಿವರಿಸಿದ್ದಾರೆ. ಮಾರ್ಚ್ 2 ರಂದು ಹೆಣ್ಣುಮಗುವಿಗೆ ಜನ್ಮನೀಡಿದ್ದ ಆಕೆ ಮಗುವನ್ನು ಉಸಿರುಗಟ್ಟಿಸಿ ಕೊಂದು, ಮನೆಯಲ್ಲಿ ಪೆಟ್ಟಿಗೆಯೊಂದರಲ್ಲಿ ಶಿಶುವಿನ ಮೃತದೇಹವನ್ನು ಹುದುಗಿಸಿಟ್ಟಿದ್ದಳು ಎಂದು ಹೇಳಿದ್ದಾರೆ. ಮನೆಗೆ ಮರಳಿದ ತಾಯಿ ಆರೋಗ್ಯದ ಬಗ್ಗೆ ತನ್ನ ಮಗಳನ್ನು ವಿಚಾರಿಸಿದ್ದು, ಈ ವೇಳೆ ಯುವತಿಯು ಎಲ್ಲ ಘಟನೆಗಳನ್ನು ಹೇಳಿಕೊಂಡಿದ್ದಾಳೆ. ಆ ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನವಜಾತ ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Also Read    ಕೇರಳದ ಮೂಲದ ದಂಪತಿಯ ಮೃತದೇಹ ಲಾಡ್ಜ್ ನಲ್ಲಿ ಪತ್ತೆ

error: Content is protected !!
Scroll to Top