(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.06. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ದ.ಕ ಜಿಲ್ಲೆಯ ಆರು ಕಡೆಗಳಲ್ಲಿ ರಕ್ತದಾನ ಶಿಬಿರ ನಡೆದಿದ್ದು, 530 ಯೂನಿಟ್ ರಕ್ತ ಸಂಗ್ರಹವಾಗಿದೆ.
ರಕ್ತ ಕೊಟ್ಟು ಬಾಂಧವ್ಯ ಕಟ್ಟು ಎಂಬ ಘೋಷಣೆಯೊಂದಿಗೆ SDPI ವಿವಿಧ ಮೆಡಿಕಲ್ ಕಾಲೇಜು ಹಾಗೂ ಬ್ಲಡ್ ಬ್ಯಾಂಕ್‌ಗಳ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಡೆಸುತ್ತಿರುವ ರಕ್ತದಾನ ಮಾಸಾಚರಣೆಯ ಎರಡನೇ ಬಾನುವಾರವಾದ ಮಾ.5ರಂದು ಜಿಲ್ಲೆಯ ಸುರತ್ಕಲ್, ಕಾನ, ಪಾಣೆಮಂಗಳೂರು, ಬೊಳಿಯಾರ್ ಸೇರಿದಂತೆ ಆರು ಕಡೆಗಳಲ್ಲಿ ಯಶಸ್ವಿ ರಕ್ತದಾನ ಶಿಬಿರವು ನಡೆಯಿತು.