ಪಾನ್ ಕಾರ್ಡ್ ಅಪ್ಡೇಟ್ ಹೆಸರಿನಲ್ಲಿ ವಂಚನೆ ➤ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 06. ಮೊಬೈಲ್ ಗೆ ಬಂದ ಲಿಂಕ್ ವೊಂದನ್ನು ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು 1 ಲಕ್ಷ ರೂ. ಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಸುಧಾಕರ ಕಾಂಚನ್ ಎಂಬವರು ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಖಾತೆ ಹೊಂದಿದ್ದು, ಮಾರ್ಚ್ 04ರಂದು ಯಾರೋ ಅಪರಿಚಿತ ವ್ಯಕ್ತಿ ಇವರಿಗೆ ಪಾನ್‌ಕಾರ್ಡ್‌ ಅಪ್ಡೇಟ್ ಮಾಡಲು ಮೆಸೇಜ್ ಕಳುಹಿಸಿದ್ದು, ಈ ಸಂದೇಶ ಬ್ಯಾಂಕ್‌ನಿಂದ ಕಳುಹಿಸಿರುವುದಾಗಿದೆ ಎಂದು ನಂಬಿದ ಸುಧಾಕರ್ ಅವರು, ಸದ್ರಿ ಲಿಂಕ್‌ನಲ್ಲಿ ವಿವರವನ್ನು ಅಪೌಡೇಟ್‌ ಮಾಡಿದ್ದಾರೆ. ಬಳಿಕ ಅವರ ಖಾತೆಯಿಂದ ರೂ.1,00,000/- ಹಣ ಆನ್ ಲೈನ್ ಮುಖೇನ ವರ್ಗಾವಣೆಗೊಂಡಿರುವುದು ಬೆಳಕಿಗೆ ಬಂದಿದೆ. ಯಾರೋ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಪಿರ್ಯಾದುದಾರರನ್ನು ವಂಚಿಸಿ ಮೋಸದಿಂದ ಹಣ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ. ಈ ಕುರಿತು ಸೆನ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ 66(C), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.

Also Read  ಶಾಲೆಯ ಕಾವಲುಗಾರ ಬಾವಿಗೆ ಹಾರಿ ಆತ್ಮಹತ್ಯೆ

error: Content is protected !!
Scroll to Top