ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಸುಬ್ರಹ್ಮಣ್ಯ ಆಯ್ಕೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.17. ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಪ್ರಕಾಶ್ ಸುಬ್ರಹ್ಮಣ್ಯ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ದಿನೇಶ್ ಹಾಲೆಮಜಲು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ವಿಶ್ವನಾಥ ನಡುತೋಟ ಹಾಗೂ ಕೋಶಾಧಿಕಾರಿಯಾಗಿ ಭರತ್ ನೆಕ್ರಾಜೆ ನೇಮಕಗೊಂಡಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಪ್ರಕಾಶ್ ರವರು ಕನ್ನಡ ಪ್ರಭ ಮತ್ತು ವಾರ್ತಾ ಭಾರತಿ ಪತ್ರಿಕೆ ಹಾಗೂ ಡೈಜಿವರ್ಲ್ಡ್ ದೃಶ್ಯ ಮಾಧ್ಯಮದ ಸುಬ್ರಹ್ಮಣ್ಯ ವಲಯದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

error: Content is protected !!
Scroll to Top