ಕಡಬ: ಗೃಹರಕ್ಷಕರ ಚುನಾವಣಾ ಪೂರ್ವ ಸಿದ್ಧತಾ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮಾ. 05. ಮುಂದಿನ ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನೇಮಿಸಬೇಕಾಗಿರುವುದರಿಂದ ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರು ಮತ್ತು ಪೌರರಕ್ಷಣಾ ಪಡೆಯ ಮುಖ್ಯಪಾಲಕರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಕಡಬ ಗೃಹರಕ್ಷಕ ದಳಕ್ಕೆ ಭಾನುವಾರದಂದು ಭೇಟಿ ನೀಡಿದರು.

ನಿಷ್ಕ್ರಿಯ ಗೃಹರಕ್ಷಕರನ್ನು ತೆಗೆದುಹಾಕಿ ಹೆಚ್ಚು ಕ್ರಿಯಾಶೀಲ ಗೃಹರಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಘಟಕಾಧಿಕಾರಿ ಶ್ರೀ ತೀರ್ಥೇಶ್ ಎ.ಎಸ್. ಅವರಿಗೆ ಸೂಚನೆ ನೀಡಿದರು. ಎಲ್ಲಾ ಗೃಹರಕ್ಷಕರು ತಮ್ಮ ಸದಸ್ಯತ್ವ ನವೀಕರಣಗೊಳಿಸಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಚುನಾವಣೆಗೆ ತಯಾರಾಗುವಂತೆ ಸೂಚನೆ ನೀಡಿದರು. ಪದೇ ಪದೇ ಕಾರಣವಿಲ್ಲದೆ ವಾರದ ಕವಾಯತಿಗೆ ಗೈರುಹಾಜರಾಗುವ ಮತ್ತು ಬಂದೋಬಸ್ತ್ ಕರ್ತವ್ಯಗಳಿಗೆ ಬಾರದೇ ಇರುವ ಗೃಹರಕ್ಷಕರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಘಟಕಾಧಿಕಾರಿಗೆ ಸೂಚನೆ ನೀಡಿದರು. ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಗೆ ಎಲ್ಲಾ ಗೃಹರಕ್ಷಕರು ನೊಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಡಬ ಘಟಕದ ಹಿರಿಯ ಗೃಹರಕ್ಷಕರಾದ ಸುಂದರ, ಉದಯಶಂಕರ್ ಭಟ್, ಪ್ರಭಾಕರ ಗೃಹರಕ್ಷಕಿಯರಾದ ಕುಸುಮಾ ಭಟ್ ಶ್ರೀ ಲತಾ, ರೂಪಾ ಮೊದಲಾದವರು ಉಪಸ್ಥಿತರಿದ್ದರು.

Also Read  ಪೊಲೀಸ್ ಬಿಟ್ಟು ರಾಜಕೀಯಕ್ಕೆ ಎಂಟ್ರಿಯಾಗ್ತಾರಾ ಅಣ್ಣಾಮಲೈ..? ➤ ಈ ಬಗ್ಗೆ ಸ್ಪಷ್ಟನೆ ನೀಡಿದ 'ಕರ್ನಾಟಕದ ಸಿಂಗಂ'

error: Content is protected !!
Scroll to Top