(ನ್ಯೂಸ್ ಕಡಬ) newskadaba.co.ಬೆಂಗಳೂರು, ಮಾ 4. 2022ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ನ್ಯಾಯವಾದಿ ಅಲೆಸ್ ಬಿಯಾಲಿಯಾಟ್‌ಸ್ಕಿ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಲಾರಸ್ ನ್ಯಾಯಾಲಯ ತೀರ್ಪು ನೀಡಿದೆ.
ಸರ್ಕಾರದ ವಿರುದ್ದ ಪ್ರತಿಭಟಿಸಲು ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಅಲೆಸ್ ಹಾಗೂ ಅವರ ಮೂವರು ಸಹೋದ್ಯೋಗಿಗಳು ತಪ್ಪತಸ್ಥರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯವು ಅವರಿಗೆ ಜೈಲು ಶಿಕ್ಷೆಯ ತೀರ್ಪು ನೀಡಿದೆ.
ಸರ್ವಾಧಿಕಾರಿ ಅಲೆಕ್ಸಾಂಡರ್ ಲುಕಶೆಂಕೊ ಅವರು 2020ರ ಚುನಾವಣೆಯಲ್ಲಿ ಮತ್ತೊಮ್ಮೆ ಬೆಲಾರಸ್‌ನ ಅಧ್ಯಕ್ಷ ಗಾದಿಗೆ ಏರಿದ್ದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಪ್ರಕರಣದಲ್ಲಿ ‘ವಯಸ್ನಾ ಮಾನವ ಹಕ್ಕು ಕೇಂದ್ರ’ದ ಸ್ಥಾಪಕ ಅಲೆಸ್ ಹಾಗೂ ಇತರ ಮೂವರು ಸಹೋದ್ಯೋಗಿಗಳು ಬಂಧಿತರಾಗಿದ್ದರು. ತಮ್ಮ ಸಂಘಟನೆಯ ಹಣವನ್ನು ರಾಜಕೀಯ ಕೈದಿಗಳ ಕಾನೂನು ಪ್ರಕ್ರಿಯೆಗಳಿಗಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.