ಉಜಿರೆ ಆಸುಪಾಸು ಮೂರು ಪ್ರದೇಶಗಳಲ್ಲಿ ಬೆಂಕಿ ಅನಾಹುತ

(ನ್ಯೂಸ್ ಕಡಬ)newskadaba.com  ಉಜಿರೆ, ಮಾ.04. ಎರಡು ಕಡೆ ಮತ್ತು ಮುಂಡಾಜೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ಶುಕ್ರವಾರ ನಡೆದಿದೆ.

ಮುಂಡಾಜೆ ಗ್ರಾಮದ ಕಡಂಬಳ್ಳಿ ಸಮೀಪ ಗುಡ್ಡದಲ್ಲಿ ಬೆಂಕಿ ಉಂಟಾಗಿ ಭೀತಿಯ ವಾತಾವರಣ ಸೃಷ್ಟಿಯಾಯಿತು. ವಿದ್ಯುತ್ ಪರಿವರ್ತಕದಿಂದ ಸಿಡಿದ ಕಿಡಿಗಳಿಂದ ಉಂಟಾದ ಬೆಂಕಿ ಸಮೀಪದ ಗುಡ್ಡವನ್ನು ಆವರಿಸಿ, ರಬ್ಬರ್ ತೋಟಕ್ಕೂ ಪಸರಿಸಿದೆ.

ತಕ್ಷಣ ಸ್ಪಂದಿಸಿದ ಸ್ಥಳೀಯ ಮಂದಿ ಬೆಂಕಿ ಇನ್ನಷ್ಟು ಹರಡದಂತೆ ಕ್ರಮ ಕೈಗೊಂಡ ಕಾರಣದಿಂದ ರಬ್ಬರ್ ತೋಟಕ್ಕೆ ಹೆಚ್ಚಿನ ಹಾನಿ ಉಂಟಾಗಿಲ್ಲ.

Also Read  ಸವಣೂರು ರಾಷ್ಟ್ರೀಯ ಯುವಸಪ್ತಾಹದಲ್ಲಿ ಮಾಹಿತಿ ಮೇಳ

 

 

error: Content is protected !!
Scroll to Top