ಮಂಗಳೂರು: ಕರಾವಳಿಗೆ ಬಿಸಿ ಗಾಳಿಯ ಆತಂಕ ➤ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

(ನ್ಯೂಸ್ ಕಡಬ)newskadaba.com ಮಂಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಸಹಿತ ಕರಾವಳಿ ಕರ್ನಾಟಕ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಬಲವಾದ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ತೀವ್ರ ಬಿಸಿಲಿನ ವಾತಾವರಣವಿದೆ. ಬೇಸಿಗೆಯ ಆರಂಭದಲ್ಲಿಯೇ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಮಾರ್ಚ್ ಮೂರನೇ ವಾರದವರೆಗೆ ಗರಿಷ್ಟ ಉಷ್ಣಾಂಶ ಮುಂದುವರಿಯುವ ಸಾಧ್ಯತೆ ಇದೆ.

Also Read  ಬೆಳ್ತಂಗಡಿ: ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top