ಹೊಸ ವರ್ಷದಂದು ಜನಿಸಿದ ಮೊದಲ ಮಗುವಿಗೆ ಸಿಕ್ಕಿತು ಬಂಪರ್ ಗಿಫ್ಟ್ ► 5 ಲಕ್ಷ ರೂ. ವಿತರಿಸಿದ ಮೇಯರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.01. ಈ ಮೊದಲೇ ಘೋಷಿಸಿದ್ದಂತೆ ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿರುವ ಡಾ. ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ ರಾತ್ರಿ 12 ಗಂಟೆ 5 ನಿಮಿಷಕ್ಕೆ ಜನಿಸಿದ ಮೊದಲ ಹೆಣ್ಣು ಮಗುವಿಗೆ ಬೆಂಗಳೂರು ಮೇಯರ್ ಸಂಪತ್ ರಾಜ್ ಅವರು 5 ಲಕ್ಷ ರೂ. ಮೌಲ್ಯದ ಚೆಕ್ ವಿತರಣೆ ಮಾಡಿದ್ದಾರೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುವ ಉದ್ದೇಶದಿಂದ 2018ನೇ ವರ್ಷದ ಸಹಜ ಹೆರಿಗೆಯ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿ ಮೇಯರ್ ರವರು ಇತ್ತೀಚೆಗೆ ಐದು ಲಕ್ಷ ರೂ. ಬಂಪರ್ ಆಫರ್ ನೀಡುವುದಾಗಿ ಘೋಷಿಸಿದ್ದರು. ಅದರಂತೆ 2018 ರ ಜನವರಿ 01 ರಂದು ರಾತ್ರಿ 12 ಗಂಟೆ 5 ನಿಮಿಷಕ್ಕೆ ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿರುವ ಡಾ. ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ ಪುಷ್ಪಾ – ಗೋಪಿ ದಂಪತಿಗೆ ಹೆಣ್ಣು ಮಗು ಜನಿಸಿದೆ.

Also Read  ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದ ಎರಡೂವರೆ ಹರೆಯದ ರಿಷಿಕ

ಅದರಂತೆ ಐದು ಲಕ್ಷ ರೂ‌. ಬಹುಮಾನ ವಿತರಿಸಿ ಮಾತನಾಡಿದ ಮೇಯರ್ ಅವರು 5 ಲಕ್ಷ ರು. ಮೊತ್ತದ ಚೆಕ್ ನ್ನು ಮಗುವಿನ ಹೆಸರಿನಲ್ಲಿ ಡೆಪಾಸಿಟ್ ಮಾಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು‌. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

error: Content is protected !!
Scroll to Top