ಸಿಹಿ ತಿಂಡಿ ಎಂದು ಇರುವೆ ಪೌಡರ್ ತಿಂದು ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com  ಚಾಮರಾಜನಗರ, ಮಾ.03. ಸಿಹಿ ಎಂದು ಭಾವಿಸಿ ಇರುವೆಗೆ ಸಿಂಪಡಿಸುವ ಪೌಡರ್ ಸೇವಿಸಿ ಐದು ವರ್ಷದ ಬಾಲಕ ಅಸುನೀಗಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ‌ ಪುಟ್ಟಿರಮ್ಮನದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕ್ಯಾತೆ ಗೌಡ ಎಂಬುವರ 5 ವರ್ಷದ ಮಗ ಶಿವು ಎಂಬ ಬಾಲಕ ಎಂದು ತಿಳಿದುಬಂದಿದ್ದು, ಮನೆಯಲ್ಲಿ ಇರುವೆಗಳನ್ನು ನಾಶ ಪಡಿಸಲು ತಂದಿಟ್ಟಿದ್ದ ಇರುವೆ ನಾಶಕವನ್ನು ಸಿಹಿ ತಿಂಡಿ ಎಂದು ತಿಂದಿದ್ದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

Also Read  ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಮೃತ್ಯು

 

error: Content is protected !!
Scroll to Top