ಮಣಿಪಾಲ: ಮನೆಯಿಂದ ಕಳವು ಪ್ರಕರಣ..! ➤ ನಾಲ್ವರು ಆರೋಪಿಗಳ ಬಂಧನ, 4 ಲಕ್ಷ ಮೌಲ್ಯದ ಸೊತ್ತು ವಶ

crime, arrest, suspected

(ನ್ಯೂಸ್ ಕಡಬ)newskadaba.com ಉಡುಪಿ, ಮಾ,03. ಮಣಿಪಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣದಲ್ಲಿ ಪೋಲಿಸರು ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಸೇರಿಸಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.

ಫೆಬ್ರವರಿ 18 ರಾತ್ರಿ 17:00 ಗಂಟೆಯಿಂದ ಫೆಬ್ರವರಿ 19 ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ ಕೃಷ್ಣ ಕೃಪಾ ಹೆಸರಿನ ಮನೆಗೆ ಯಾರೋ ಕಳ್ಳರು ಒಳ ಪ್ರವೇಶಿಸಿ ಮನೆಯ ಬೆಡ್ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ ಅಂದಾಜು 20 ಗ್ರಾಂ ಕಿವಿಯ ಯೋಲೆ ಮತ್ತು ಸರ, ಅಂದಾಜು 20 ಗ್ರಾಂ ಪೆಂಡೆಂಟ್ ಇರುವ‌ ಚಿನ್ನದ ಸರ, ಅಂದಾಜು 4 ಗ್ರಾಂ ಚಿನ್ನದ ಉಂಗುರ, ಅಂದಾಜು 8 ಗ್ರಾಂ ಚಿನ್ನದ ಸರ, 2 ಗ್ರಾಂ ಮೂಗಿನ ಬೊಟ್ಟು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 2,40,000/- ಆಗಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Also Read  ಎಸ್.ಸಿ.ಎಸ್. ಆಸ್ಪತ್ರೆಯ 37ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ

 

error: Content is protected !!
Scroll to Top