ಬೆಳ್ತಂಗಡಿ: ಹೊಸ ವರ್ಷಾಚರಣೆ ಮುಗಿಸಿ ಮನೆಗೆ ಬಂದ ಮಗ ► ಕುಡಿದ ಮತ್ತಿನಲ್ಲಿ ತಂದೆಗೆ ಗಾಜಿನ ಚೂರಿನಿಂದ ಇರಿತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.01. ಹೊಸ ವರ್ಷದ ಸಂತೋಷ ಕೂಟ ಮುಗಿಸಿ ಕಂಠ ಮೂರ್ತಿ ಕುಡಿದು ಬಂದ ಮಗನೋರ್ವ ಕುಡಿತದ ಮತ್ತಿನಲ್ಲಿ ತಂದೆಗೆ ಗಾಜಿನ ಚೂರಿನಿಂದ ಇರಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಇರಿತಕ್ಕೊಳಗಾದವರನ್ನು ಬೆಳ್ತಂಗಡಿಯ ಚರ್ಚ್ ಕ್ರಾಸ್ ಬಳಿಯ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ತನ್ನ ಪುತ್ರ ನವೀನ್ ಎಂಬಾತ ಡಿಸೆಂಬರ್ 31 ರ ತಡರಾತ್ರಿ ಕುಡಿತದ ಅಮಲಿನಲ್ಲಿ ಮನೆಗೆ ಬಂದು ಕೈಗೆ ಸಿಕ್ಕ ವಸ್ತುಗಳಿಂದ ಕಿಟಕಿ-ಗಾಜು, ಟಿವಿಗಳನ್ನು ಹಾನಿಗೊಳಿಸಿದ್ದಾನೆ.

ತಕ್ಷಣ ಎಚ್ಚೆತ್ತುಕೊಂಡ ಆತನ ತಂದೆ ಮಂಜುನಾಥ್ ನವೀನ್ ಗೆ ಥಳಿಸಲು ಮುಂದಾಗಿದ್ದಾರೆ. ಆಗ ಅಲ್ಲೆ ಇದ್ದ ಮಚ್ಚನ್ನು ಎತ್ತಿಕೊಂಡ ನವೀನ್ ಮನೆಯವರೆಲ್ಲರ ಮೇಲೆ ದಾಳಿ ಮಾಡಿ ಬೆದರಿಸಲು ಯತ್ನಿಸಿದ್ದು, ಗಾಜಿನ ಚೂರನ್ನು ತೆಗೆದುಕೊಂಡು ತಂದೆಯ ಹೊಟ್ಟೆಗೆ ಚುಚ್ಚಿದ್ದಾನೆ. ಈತನ ಅವಾಂತರಕ್ಕೆ ಬೊಬ್ಬಿಟ್ಟಾಗ ನೆರೆಹೊರೆಯವರು ಧಾವಿಸಿ ಬಂದಾಗ ಆರೋಪಿ ನವೀನ್ ಮನೆಯಿಂದ ಪರಾರಿಯಾಗಿದ್ದಾನೆ. ಗಾಯಾಳು ಮಂಜುನಾಥ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

Also Read  ಬೆಳ್ತಂಗಡಿ: ಬಾಲಕಿಯ ಅತ್ಯಾಚಾರ ಪ್ರಕರಣ ➤ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ

error: Content is protected !!
Scroll to Top