(ನ್ಯೂಸ್ ಕಡಬ) newskadaba.com. ಬೆಂಗಳೂರು. ಮಾ.02. ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ. ವಿಜಯ (28) ನಿಷಾ(7) ದೀಕ್ಷಾ(5) ಮೃತ ಪಟ್ಟವರು .
ಪತಿ ನಾಗೇಂದ್ರ ವಿಷ ಬೆರೆಸಿದ ಊಟವನ್ನು ನೀಡಿದ್ದು, ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿಯೇ ನರಳಾಡಿ ಸಾವನ್ನಪ್ಪಿದ್ದಾರೆ. ಬಳಿಕ ನಾಗೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ಪತಿ ನಾಗೇಶ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.