ಮಾರ್ಚ್‌ನಲ್ಲಿ 3 ಬಾರಿ ಕರ್ನಾಟಕಕ್ಕೆ ಮೋದಿ ಆಗಮನ..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮೊದಲೇ ಈ ತಿಂಗಳಲ್ಲಿ ಮೂರು ಬಾರಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯಿದೆ. ಈ ಪೈಕಿ ಎರಡು ಬಾರಿ ಆಗಮಿಸುವುದು ನಿಶ್ಚಿತವಾಗಿದೆ. ಮೂರನೇ ಬಾರಿ ಆಗಮಿಸುವ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.


ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಮಾ.12 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ. ಈ ಮೊದಲು 11ರಂದು ಮಂಡ್ಯಕ್ಕೆ ಆಗಮಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಒಂದು ದಿನ ಮುಂದೂಡಲ್ಪಟ್ಟಿದೆ. ಇದು 16ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

Also Read  ದಿನಕ್ಕೊಂದು ರಾಜ್ಯ, ಗಂಟೆಗೊಂದು ಸಿಮ್ ➤ ಸ್ಯಾಂಟ್ರೋ ರವಿ ಬಂಧನ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ..!

error: Content is protected !!
Scroll to Top