ಮಂಗಳೂರು: 4 ವರ್ಷದ ಮಗುವಿನೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ     

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.02. ತನ್ನ 4 ವರ್ಷದ ಮಗುವಿನೊಂದಿಗೆ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೊಡಿಯಾಲ್ ಗುತ್ತಿನಲ್ಲಿ ನಡೆದಿದೆ.

ಬುಧವಾರ ಮಧ್ಯಾಹ್ನ ಮಹಿಳೆ ತನ್ನ 4 ವರ್ಷದ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಜಯ(33) ಮತ್ತು ಶೋಭಿತಾ (4) ಮೃತಪಟ್ಟವರು. ಇಬ್ಬರು ಮಕ್ಕಳ ಜತೆಗೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು ಇನ್ನೋರ್ವ ಮಗಳು ನೇಣಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

 

error: Content is protected !!
Scroll to Top