ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿ ಮೃತ್ಯು

(ನ್ಯೂಸ್ ಕಡಬ)newskadaba.com ದುಬೈ, ಮಾ.02. ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಸಿರಿಯಾ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿ ಮೃತಪಟ್ಟಿದ್ದಾನೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ.


ಜರ್ಮನಿಯಲ್ಲಿ ನೆಲೆಸಿದ್ದ ಹೋಮ್ಸ್‌ನ 53 ವರ್ಷದ ಸಿರಿಯನ್ ವ್ಯಕ್ತಿ ಗಾಝಿ ಜಸ್ಸಿಮ್ ಶೆಹದೆಹ್ ಸೈಕಲ್ ನಲ್ಲಿ ಪ್ರಯಾಣಿಸಿ 73 ದಿನಗಳ ನಂತರ ಮೆಕ್ಕಾದ ಗ್ರ್ಯಾಂಡ್ ಮಸೀದಿಗೆ ತಲುಪಿದ್ದರು‌. ಶೆಹಾದೆಹ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಮ್ಮ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದರು. ಅವರ ಅನುಭವಗಳು ಮತ್ತು ಸವಾಲುಗಳನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.

Also Read  ಕುಮಾರಸ್ವಾಮಿಯನ್ನು ಮಣಿಸಲು ಬಿಜೆಪಿಯಿಂದ ಕಣಕ್ಕಿಳಿದ ಯೋಗೇಶ್ವರ್‌..!​


ವರದಿಗಳ ಪ್ರಕಾರ, ಶೆಹಾದೆಹ್ ನಂಬಿಕೆ ಮತ್ತು ಭಕ್ತಿಯನ್ನು ವ್ಯಕ್ತಪಡಿಸಲು ಮೆಕ್ಕಾಗೆ ತನ್ನ ಯಾತ್ರೆಯನ್ನು ಪೂರ್ಣಗೊಳಿಸಲು ಬಯಸಿದ್ದರು.ಅದರಂತೆ ಮೆಕ್ಕಾ ತಲುಪಿ ಮೃತಪಟ್ಟಿದ್ದಾರೆ.

 

error: Content is protected !!
Scroll to Top