ಗೃಹಬಳಕೆಯ ಎಲ್ ಪಿಜಿ ದರದಲ್ಲಿ ಭಾರೀ ಏರಿಕೆ ➤ ಇಂದಿನಿಂದಲೇ ನೂತನ ದರ ಜಾರಿ

ನ್ಯೂಸ್ ಕಡಬ) newskadaba.com. ನವದೆಹಲಿ , ಮಾ 01. ಗೃಹ ಬಳಕೆಯ ಅಡುಗೆ ಅನಿಲ ಬೆಲೆ ಮತ್ತೆ ಹೆಚ್ಚಳವಾಗಿದೆ. ನೂತನ ದರ ಇಂದಿನಿಂದ ಜಾರಿಗೆ ಬರಲಿದೆ. ಪ್ರತಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳವಾಗಿದೆ. 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು, ನೂತನ ದರ ಇಂದಿನಿಂದ ಜಾರಿಗೆ ಬರಲಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 1103 ರೂ. ಆಗಿದ್ದು, ಎಂಟು ತಿಂಗಳ ಬಳಿಕ ಗೃಹ ಬಳಕೆಯ ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿದೆ. ಜುಲೈ 6 2022ರಿಂದ ದೇಶೀಯ ಎಲ್​ಪಿಜಿ ಸಿಲಿಂಡರ್ ಬೆಲೆಗಳು ಸ್ಥಿರವಾಗಿವೆ. ವಾಣಿಜ್ಯ ಸಿಲಿಂಡರ್ ಬೆಲೆ 350 ರೂ. ಹೆಚ್ಚಾಗಿದೆ.

Also Read  ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್   ➤ ನೀತಿ ಸಂಹಿತೆ ಪರಿಣಾಮ ದರ ಪರಿಷ್ಕರಣೆ ಮುಂದೂಡಿಕೆ..!!

ಫೆಬ್ರವರಿ 28 ರಂದು ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ದೆಹಲಿಯಲ್ಲಿ 1769 ರೂ. ಬದಲು 2119.5 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ 1870 ರೂ. ಇದ್ದು, ಇದೀಗ 2221.5 ರೂ,ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 1917ರೂ,ಗೆ ಲಭ್ಯವಿದ್ದ ಸಿಲಿಂಡರ್ ಇದೀಗ 2268 ರೂ,ಗೆ ಲಭ್ಯವಾಗಲಿದೆ.

error: Content is protected !!
Scroll to Top