ನಾಗರಹೊಳೆಯಲ್ಲಿ 104 ರಣಹದ್ದುಗಳು ಪತ್ತೆ

(ನ್ಯೂಸ್ ಕಡಬ)newskadaba.com ನಾಗರಹೊಳೆ, ಮಾ.01. ನಾಗರಹೊಳೆಯಲ್ಲಿ 104 ರಣಹದ್ದುಗಳು ಪತ್ತೆಯಾಗಿವೆ. ದಕ್ಷಿಣ ಭಾರತದಲ್ಲಿ 4 ಪ್ರಭೇದಗಳ ರಣಹದ್ದುಗಳು ಕಂಡುಬಂದಿದ್ದು ಬಿಳಿ ಬೆನ್ನಿನ ರಣಹದ್ದು, ಭಾರತೀಯ, ಕೆಂಪು ತಲೆಯ ರಣಹದ್ದು, ಈಜಿಪ್ಟಿಯನ್  ರಣಹದ್ದು ಈ ನಿಟ್ಟಿನಲ್ಲಿ ಕರ್ನಾಟಕ ಕೇರಳ ಹಾಗೂ ತಮಿಳುನಾಡು ಮೂರು ರಾಜ್ಯಗಳಲ್ಲಿ ಏಕಕಾಲಕ್ಕೆ ಕ್ರೋಡಿಕೃತ ರಣ ಹದ್ದುಗಳ ಸರ್ವೇಕ್ಷಣ ಕಾರ್ಯ  ಹಮ್ಮಿಕೊಳ್ಳಲಾಗಿತ್ತು.

ಅದರಂತೆ ನಾಗರಹೊಳೆ ಪಕ್ಷಿ ವೀಕ್ಷಕರು ಹಾಜರಿದ್ದು ಈ ಸರ್ವೇಕ್ಷಣ ಕಾರ್ಯವನ್ನು ನಡೆಸಿದ್ದಾರೆ. ಬಿಳಿ ಬೆನ್ನಿನ ರಣಹದ್ದು 61 ಕೆಂಪು ತಲೆಯ ರಣಹದ್ದು 30, ಈಜಿಪ್ಟಿಯನ್  ರಣಹದ್ದು ಸೇರಿದಂತೆ ಒಟ್ಟು104 ರಣಹದ್ದುಗಳು ಈ  ಭಾಗದಲ್ಲಿ ಕಂಡುಬಂದಿವೆ ಎಂದು ನಾಗರಹೊಳೆ ಉಪ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

Also Read  ನೆಟ್ಟಣ: ಎಟಿಎಂ ದರೋಡೆಗೆ ವಿಫಲ ಯತ್ನ ► ಕಟ್ಟಡ ಮಾಲಕರ ಸಮಯ ಪ್ರಜ್ಞೆಯಿಂದ ಕಳ್ಳರು ಪರಾರಿ

 

error: Content is protected !!
Scroll to Top