ಬಿಳಿನೆಲೆ ಪರಿಸರದಲ್ಲಿ ವ್ಯಾಪಕ ಕಾಡಾನೆ ಹಾವಳಿ ► ಭಯದ ವಾತಾವರಣದಲ್ಲಿ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಕಡಬ, ಡಿ.31. ಸಮೀಪದ ಬಿಳಿನೆಲೆ ಗ್ರಾಮದ ಪುತ್ತಿಲ ಬೈಲು, ಚಿದ್ಗಲ್ ಪರಿಸರದಲ್ಲಿ ಕಳೆದ ಕೆಲವು ದಿಗಳಿಂದ ಕಾಡಾನೆ ಲಗ್ಗೆ ಇಟ್ಟು ಕೃಷಿ ನಾಶವಾಗುತ್ತಿದೆ. ಇದರಿಂದಾಗಿ ಪರಿಸರದ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಪುತ್ತಿಲಬೈಲು ಹರಿಯಪ್ಪ ಗೌಡ, ಹಿರಿಯಣ್ಣ ಗೌಡ, ನಾಗಪ್ಪ ಗೌಡ, ಕೇಶವ ಗೌಡ, ಮುಂತಾದವರ ತೋಟಕ್ಕೆ ದಾಳಿ ನಡೆಸಿರುವ ಆನೆ 15 ಕ್ಕಿಂತಲೂ ಹೆಚ್ಚು ತೆಂಗಿನ ಮರ, 20 ಕ್ಕಿಂತಳು ಹೆಚ್ಚು ಅಡಕೆ ಮರ, ತೋಟದಲ್ಲಿ ನೀರಾವರಿಗಾಗಿ ಬಳಸುವ ಸ್ಪ್ರಿಂಕ್ಲರ್, ಪೈಪು ಹಾಗೂ ಸೋಲಾರ್ ಬೇಲಿಗಳನ್ನು ನಾಶ ಮಾಡಿದೆ. ಚಿದ್ಗಲ್ ನಿವಾಸಿಗಳಾದ ಸುರೇಶ್ ಬೈಲು, ಕೃಷ್ಣ ಪ್ರಸಾದ್ ಬೈಲು, ಮುಂತಾದವರ ತೋಟದ ಹತ್ತಕ್ಕಿಂತಲೂ ಹೆಚ್ಚು ತೆಂಗಿನ ಮರ, ಅಡಕೆ ಮರ, 40 ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶ ಮಾಡಿದೆ, ಇತ್ತೀಚೆಗೆ ಬಿಳಿನೆಲೆ ಗ್ರಾಮದ ಸಿಪಿಸಿಆರ್ಐ ಕಿದು, ಸಣ್ಣಾರ, ಪ್ರದೇಶಗಳಿಗೂ ಕಾಡಾನೆಗಳು ನುಗ್ಗಿ ತೆಂಗು ಅಡಕೆ ಗಿಡಗಳನ್ನು ನಾಶ ಮಾಡಿರುವ ಬೆನ್ನಲ್ಲೇ ಬಿಳಿನೆಲೆ ಪ್ರದೇಶದಲ್ಲಿ ಆನೆ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ನಾಗರೀಕರ ಆನೆ ಓಡಿಸುವ ತಂತ್ರಗಳು ವಿಫಲವಾಗುತ್ತಿವೆ. ಕೃಷಿಕರು ಕಂದಕ ತೋಡಿದರೂ ಅದನ್ನು ದಾಟಿ ಬರುವನ್ನು ಶಕ್ತಿಯುತ ಆನೆಗಳು ಇಲ್ಲಿ ಬರುತ್ತಿವೆ. ಇದರಿಂದ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Also Read  Зеркало Cat | Интернет казино обзор, игровые бесплатно в слоты

ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಸೂಕ್ತ ಕ್ರಮಕೈಗೊಂಡು ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

error: Content is protected !!
Scroll to Top