(ನ್ಯೂಸ್ ಕಡಬ)newskadaba.com ಹೊಸಪೇಟೆ, ಫೆ.28. ಹಂಪಿಯ ಹೇಮಕೂಟ ಬೆಟ್ಟದಲ್ಲಿ ಯುವಕರು ಕುಣಿದು ಕುಪ್ಪಳಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 14ನೇ ಶತಮಾನದ ಪುರಾತನ ಸ್ಮಾರಕದ ಮಂಟಪಕ್ಕೆ ಹತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ವಿರೋಧ ವ್ಯಕ್ತವಾಗಿ ಹಂಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಆಧರಿಸಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಳೆದ ವಾರ ಹಂಪಿಯ ಪವಿತ್ರ ಪುರಂದರ ಮಂಟಪದಲ್ಲಿ ವಿದೇಶಿಗರ ಗುಂಪು ಪಾರ್ಟಿ ಮಾಡುತ್ತಿರುವುದು ಕಂಡು ಬಂದಿತ್ತು.
Also Read ಉದನೆ ಪುತ್ಯ ಭಾಗದಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ ➤ 'ಆಪರೇಷನ್ ಎಲಿಫೆಂಟ್' ರೆಂಜಿಲಾಡಿಯಿಂದ ಉದನೆಗೆ ಶಿಫ್ಟ್