(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.28. ಗ್ರಾ.ಪಂ ಉಪಚುನಾವಣೆಯಲ್ಲಿ ಅನಂತಾಡಿ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಶಶಿಕಲಾ 254 ಮತಗಳನ್ನು ಗಳಿಸಿ ಬಿಜೆಪಿ ಬೆಂಬಲಿತ ಗೀತಾ 242 ಮತಗಳನ್ನು ಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಬೆಂಬಲಿತರು ಖಾತೆ ತೆರೆದಂತಾಗಿದೆ.
ನೆಟ್ಲ ಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಸುಜಾತ 353 ಮತ ಗಳಿಸಿ ಗೆಲುವು ಸಾಧಿಸಿದರೆ ಕಾಂಗ್ರೆಸ್ ಹರಿಣಾಕ್ಷಿ ಸೋಲು ಕಂಡರು ಎನ್ನಲಾಗಿದೆ.
