ಪಿಂಚಣಿ ವಂತಿಕೆ ಸಂದಾಯಕ್ಕೆ ಮಾರ್ಚ್ 1 ಅಂತಿಮ ದಿನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 28. ಕರ್ನಾಟಕ ರಾಜ್ಯ ರಸ್ತೆ ನಿಗಮದಲ್ಲಿ 2014 ಸೆಪ್ಟೆಂಬರ್ 1ರ ನಂತರ ನಿವೃತ್ತಿ ಹೊಂದಿರುವ (ಪಿಂಚಣಿ ವಯೋಮಿತಿ 58 ವರ್ಷ ಪೂರ್ಣಗೊಂಡ), ರಾಜೀನಾಮೆ, ಸ್ವಯಂ ನಿವೃತ್ತಿ ಹೊದಿರುವ ಸಂಸ್ಥೆಯ ಮಾಜಿ ನೌಕರರು ಹಾಗೂ ಪ್ರಸ್ತುತ ಸೇವೆಯಲ್ಲಿರುವ ಎಲ್ಲಾ ನೌಕರರು ಪಿಂಚಣಿ ಯೋಜನೆ-1995ರಲ್ಲಿ ಕಾಲಕಾಲಕ್ಕೆ ನಿಗದಿಪಡಿಸಿರುವ ವೇತನ ಮಿತಿ ಪಿಂಚಣಿ ವಂತಿಗೆಯ ಬದಲಾಗಿ ಒಟ್ಟು ವೇತನದ ಮೇಲೆ ಪಿಂಚಣಿ ವಂತಿಕೆ ಸಂದಾಯ ಮಾಡಲು ಇಚ್ಛಿಸುವ ನೌಕರರು ಅನುಬಂಧ-ಅ ನಮೂನೆ ಪ್ರಕಾರ 2023ರ ಮಾರ್ಚ್ 1ರ ಬುಧವಾರದೊಳಗೆ ಜಂಟಿ ಆಯ್ಕೆ ಪತ್ರವನ್ನು ಸಲ್ಲಿಸಬೇಕು.

ಈಗಾಗಲೇ ಸೇವೆಯಿಂದ ನಿವೃತ್ತಿ ಹೊಂದಿರುವ (ಪಿಂಚಣಿ ವಯೋಮಿತಿ 58 ವರ್ಷ ಪೂರ್ಣಗೊಂಡ), ರಾಜೀನಾಮೆ, ಸ್ವಯಂ ನಿವೃತ್ತಿ ಹೊದಿರುವ ಸಂಸ್ಥೆಯ ನೌಕರರು ಜಂಟಿ ಆಯ್ಕೆ ಪತ್ರದ ನಮೂನೆಯನ್ನು ತ್ರಿಪ್ರತಿಗಳಲ್ಲಿ ಸ್ಪಷ್ಟವಾಗಿ ಪೂರ್ತಿ ಮಾಹಿತಿ ಭರ್ತಿ ಮಾಡಿ ಸಹಿಯೊಂದಿಗೆ ಪಿಂಚಣಿ ಅಭ್ಯರ್ಥಿಯ ಫಾರಂ-10 ಡಿ ಸಲ್ಲಿಸಿರುವ ವಿಭಾಗೀಯ ಕಚೇರಿಗೆ ಸಲ್ಲಿಸುವುದು. ಜಂಟಿ ಆಯ್ಕೆ ಪತ್ರಗಳನ್ನು ಪ್ರಾದೇಶಿಕ ಭವಿಷ್ಯನಿಧಿ ಕಚೇರಿಗೆ ಸಲ್ಲಿಸಿ, ಸ್ವೀಕೃತಿ ಪಡೆಯಲು ಇದೇ ಮಾ. 03ರಂದು ಕೊನೆಯ ದಿನ ಎಂದು  ಕ.ರಾ.ರ.ಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಶ್ರೀ ಕ್ಷೇತ್ರ ಪಣೋಲಿಬೈಲು ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ರಶ್ಮಿ ಎಸ್. ಆರ್ ನೇಮಕ

error: Content is protected !!
Scroll to Top