ಸುರತ್ಕಲ್: ವಿದ್ಯಾರ್ಥಿಗೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.31. ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳಿಬ್ಬರು ವಿದ್ಯಾರ್ಥಿನೋರ್ವನಿಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಸುರತ್ಕಲ್ ಸಮೀಪದ ಕುಳಾಯಿ ಬಳಿ ಭಾನುವಾರದಂದು ನಡೆದಿದೆ.

ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿಯನ್ನು ಕುಳಾಯಿ ವಿದ್ಯಾನಗರ ನಿವಾಸಿ ಸಿದ್ದೀಕ್ ಎಂಬವರ ಪುತ್ರ ಸೌಹಾನ್ (18) ಎಂದು ಗುರುತಿಸಲಾಗಿದೆ. ನಗರದ ಕಾಲೇಜೊಂದರ ವಿದ್ಯಾರ್ಥಿಯಾದ ಸೌಹಾನ್ ಕುಳಾಯಿಯ ಮೈಂದಗುರಿ ಎಂಬಲ್ಲಿನ ಸಂಬಂಧಿಕರ ಮನೆಗೆ ತೆರಳಿ ದ್ವಿಚಕ್ರ ವಾಹನದಲ್ಲಿ ವಿದ್ಯಾನಗರಕ್ಕೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಈತನ ಹೆಸರು ಕೇಳಿ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ. ಕೈಗೆ ಗಾಯಗೊಂಡ ಸೌಹಾನ್‌ನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

Also Read  ಕಡಬ ತಾಲೂಕಿನಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆ ನಾಯಿಗಳ ಮೇಲೆ ದಾಳಿ

error: Content is protected !!
Scroll to Top