40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಕಡಬ ಪೊಲೀಸರು..!

(ನ್ಯೂಸ್ ಕಡಬ) newskadaba.com ಕಡಬ, ಫೆ. 28. ಶ್ರೀಗಂಧ ಹಾಗೂ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಸಕಲೇಶಪುರ ತಾಲೂಕಿನ ಕೊಡಿಗೆ ಗ್ರಾಮದ ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕಡಬ ಠಾಣಾ ಹೆಚ್.ಸಿ ಗಳಾದ ರಾಜು ನಾಯಕ್, ಭವಿತ್ ರಾಜ್ ಮತ್ತು ಪಿ.ಸಿ ಸಿರಾಜುದ್ದೀನ್ ಎಂಬವರು ಮೂಡಿಗೆರೆ ತಾಲೂಕಿನ ಬಾಳೂರು ಎಂಬಲ್ಲಿ ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ‌. ಬಂಧಿತ ಆರೋಪಿಯ ಮೇಲೆ ರಾಣೆಬೆನ್ನೂರು ಹಾಗೂ ಮೈಸೂರು ವಿವಿಪುರಂ ಠಾಣೆಯ ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿರುವುದಾಗಿ ತಿಳಿದುಬಂದಿದೆ.

Also Read  ಕೊಂಬಾರು ಸಿ.ಆರ್.ಸಿ. ಕಾಲೋನಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ನಿಗಮದ ಕಛೇರಿ ಎದುರು ಪ್ರತಿಭಟನೆ

error: Content is protected !!
Scroll to Top