ಕಡಬ: ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಫೆ. 28. ಕಳೆದ ಕೆಲವು ದಿನಗಳ ಹಿಂದೆ ಆನೆ ದಾಳಿಯಿಂದ ರೆಂಜಿಲಾಡಿ ಗ್ರಾಮದ ಇಬ್ಬರು ಮೃತಪಟ್ಟ ಬಳಿಕ ಕಾಡಾನೆಗಳ ಸೆರೆಹಿಡಿಯುವ ಕಾರ್ಯಾಚರಣೆಯು ಭರದಿಂದ ಸಾಗಿದ್ದಲ್ಲದೇ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ, ಇದೀಗ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು ಸಾಕು ಆನೆಗಳನ್ನು ವಾಪಾಸು ಕೊಂಡೊಯ್ಯಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಸುಬ್ರಹ್ಮಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಆನೆ ಇರುವ ಬಗ್ಗೆ ಗ್ರಾಮಸ್ಥರಿಂದ ಯಾವುದೇ ದೂರುಗಳು ಬರುತ್ತಿಲ್ಲ, ಇಲಾಖಾ ಸಿಬ್ಬಂದಿಗಳು ರಾತ್ರಿ ಹಗಲು ಗಸ್ತು ತಿರುಗುತ್ತಿದ್ದೇವೆ ಎಂದು ಹೇಳಿದ್ದಾರೆ.

Also Read  ಪುತ್ತೂರು :ಗಾಂಜಾ ನಶೆಯಲ್ಲಿದ್ದ ಇಬ್ಬರು ಪೊಲೀಸ್ ವಶಕ್ಕೆ

error: Content is protected !!
Scroll to Top