(ನ್ಯೂಸ್ ಕಡಬ)newskadaba.com ಸುರತ್ಕಲ್, ಫೆ.28. ಗಾಂಜಾ ಅಮಲಿ ನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ, ರಿಕ್ಷಾಕ್ಕೆ ಹಾನಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಪಣಂಬೂರು ಮೋಗವೀರ ಮಹಾಸಭಾ ವ್ಯಾಪ್ತಿಯ ಸಮುದ್ರ ತೀರದಲ್ಲಿ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯವಾರ ಪ್ರತೀಕ್ ಎಂಬಾತನನ್ನು ಬಂಧಿಸಲಾಗಿತ್ತು. ನಿನ್ನೆ ಅಮಲ್ ಅಜಯನ್ ಮತ್ತು ನಿಶಾಂತ್ ಗೆ ಬಂಧಿಸಲಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಸುನಿಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.
