(ನ್ಯೂಸ್ ಕಡಬ) newskadaba.com. ನವದೆಹಲಿ ಫೆ.27. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ಮಧ್ಯ ಹಗರಣ ಕೇಸ್ ಗೆ ಸಂಬಂಧಿಸಿ ಈ ಹಿಂದೆ ಸಿಬಿಐ ಈ ಪ್ರಕರಣದಲ್ಲಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಮನೀಶ್ ಅಬಕಾರಿ ನೀತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಕೆಲವು ಸೂಚನೆಗಳನ್ನು ನೀಡಿದ್ದರು ಎಂದು ಅವರು ಹೇಳಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.
ಮನೀಶ್ ಸಿಸೋಡಿಯಾ ಅವರು ಸಿಬಿಐ ವಿಚಾರಣೆಗೆ ಆಗಮಿಸಬೇಕಿತ್ತು. ವಿಚಾರಣೆಗೆ ಬರುವಂತೆ ಸಿಬಿಐಯು ಇವರನ್ನು ಕರೆದಿತ್ತು. ಆದರೆ, ಬಜೆಟ್ ಕಾರಣ ನೀಡಿ ಇವರು ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಬಳಿಕ ಫೆಬ್ರವರಿ 26ಕ್ಕೆ ವಿಚಾರಣೆ ದಿನಾಂಕ ನಿಗದಿಪಡಿಸಲಾಗಿತ್ತು.