➤ ಪಿಕಪ್, ಆಟೋ ಮುಖಾಮುಖಿ ಢಿಕ್ಕಿ ➤ ಮಹಿಳೆ ಗಂಭೀರ!

(ನ್ಯೂಸ್ ಕಡಬ) newskadaba.com.ಕುಂದಾಪುರ. ಫೆ.27. ಪಿಕಪ್ ವಾಹನ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡ  ಘಟನೆ ಹೆಮ್ಮಾಡಿ ಸಮೀಪದ ಮೂವತ್ತುಮುಡಿ ಸೇತುವೆ ಬಳಿ ನಡೆದಿದೆ. ಅಪಘಾತದ ವೇಳೆ ಆಟೋ ರಿಕ್ಷಾ ಡಿವೈಡರ್ ಏರಿದ್ದು, ಪಿಕಪ್ ವಾಹನ ರಸ್ತೆಯಿಂದ ಕೆಳಗಿಳಿದು ಹೊಳೆಗೆ ಜಾರಿದೆ.

ಆಟೋದಲ್ಲಿ ನಾಲ್ವರಿದ್ದು, ಮಹಿಳೆಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಪಿಕಪ್ ವಾಹನದಲ್ಲಿ ಇಬ್ಬರು ಇದ್ದು, ಚಾಲಕನಿಗೆ  ಣ್ಣ ಪುಟ್ಟಗಾಯವಾಗಿದೆ. ಈ ಕುರಿತು ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group