ಮಂಗಳೂರು: ಸೆಕ್ಯೂರಿಟಿ ಗಾರ್ಡ್ ಗೆ ಬೆದರಿಸಿ ಜ್ಯುವೆಲ್ಲರಿ ಅಂಗಡಿ ಕಳ್ಳತನ

(ನ್ಯೂಸ್ ಕಡಬ) newskadaba.com ಕಾರ್ಕಳ, ಫೆ. 27. ಜ್ಯುವೆಲ್ಲರ್ಸ್ ಅಂಗಡಿಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಲೆಬಾಳುವ ಬೆಳ್ಳಿ ವಸ್ತುಗಳ ಕಳ್ಳತನ ನಡೆಸಿದ ಘಟನೆ ಕಾರ್ಕಳ ನಿಟ್ಟೆ ಎಂಬಲ್ಲಿ ಭಾನುವಾರದಂದು ತಡರಾತ್ರಿ ನಡೆದಿದೆ.

ಅಖಿಲೇಶ್ ಮಾಲಕತ್ವದ ಆರಾಧ್ಯ ಜ್ಯುವೆಲ್ಲರ್ಸ್ ಗೆ ತಡರಾತ್ರಿ 2 ಗಂಟೆ ಸುಮಾರಿಗೆ ನುಗ್ಗಿದ ಕಳ್ಳರು, ಟಿಪ್ಪರ್ ಅಡ್ಡ ಇಟ್ಟು ಅನಂತರ, ಯಾವುದೇ ರೀತಿಯಲ್ಲಿ ಗುರುತು ಸಿಗದ ಹಾಗೆ, ಮುಖಕ್ಕೆ ಮುಸುಕು ಹಾಕಿಕೊಂಡು, ಅಂಗಡಿಯ ಬೀಗ ಒಡೆದು ಒಳಗೆ ನುಗ್ಗಿ ಕಳವು‌ ಕೃತ್ಯ ಎಸಗಿದ್ದಾರೆ. ಕೃತ್ಯದ ಬಗ್ಗೆ ಅನುಮಾನಗೊಂಡ ಸ್ಥಳೀಯ ಅಂಗಡಿಯ ಸೆಕ್ಯೂರಿಟಿ ಗಾರ್ಡ್ ಘಟನಾ‌ ಸ್ಥಳದತ್ತ ಹೋದಾಗ ದುಷ್ಟರ್ಮಿಗಳು ಪಿಸ್ತೂಲ್ ತೋರಿಸಿ, ಬೆದರಿಸಿದ್ದಾರೆಂಬ ಮಾಹಿತಿ ಲಭಿಸಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಸಿಬ್ಬಂದಿಗಳು ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಕರಾವಳಿ ಉತ್ಸವದಲ್ಲಿ  ಇಂದಿನ ಕಾರ್ಯಕ್ರಮಗಳು

error: Content is protected !!
Scroll to Top