ರಾಜ್ಯಮಟ್ಟದ ರಿಲೇ ಸ್ಪರ್ಧೆ ➤ ಸೈಂಟ್ ಆನ್ಸ್ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 26. ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟವು ಚಾಮುಂಡಿ ವಿಹಾರ ಸ್ಟೇಡಿಯಂ ಮೈಸೂರಿನಲ್ಲಿ ಫೆ. 19 ರಿಂದ 22 ರ ವರೆಗೆ ನಡೆದು 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 4*100ಮೀಟರ್ ರಿಲೇಯಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬಿಜೇರು ಮನೆ ಶ್ರೀಧರ್ ಗೌಡ ಮತ್ತು ಲೋಲಾಕ್ಷಿ ದಂಪತಿ ಪುತ್ರಿ ಕುಮಾರಿ ನವ್ಯಾ, ಅಮೈ ಮನೆ ಕರುಣಾಕರ ರೈ ಮತ್ತು ವಿಜಯಲಕ್ಷ್ಮಿ ರೈ ದಂಪತಿ ಪುತ್ರಿ ಕುಮಾರಿ ದೃತಿ.ಕೆ.ರೈ, ಮೇಲಿನ ಮನೆ ಸತೀಶ್ ನಾಯಕ್ ಮತ್ತು ಶಾಲಿನಿ ಸತೀಶ್ ದಂಪತಿ ಪುತ್ರಿ ಕುಮಾರಿ ತೀಕ್ಷ ಎಸ್, ಅಶ್ರಫ್ ಮತ್ತು ಸಫಿಯಾ ದಂಪತಿ ಪುತ್ರಿ ಕುಮಾರಿ ಫಾತಿಮಾ ಫಿದಾ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಡಿಂಪಲ್ ಶೆಟ್ಟಿ, ಕುಮಾರಿ ಕೃತಿ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ, ಚಿನ್ನದ ಪದಕವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Also Read  ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ► ಪಟ್ಟಾಭಿಷೇಕದ ಸುವರ್ಣ ಮಹೋತ್ಸವ


ವಿಜೇತರಾದ ವಿಧ್ಯಾರ್ಥಿಗಳಿಗೆ ಮತ್ತು ತರಬೇತಿಗೊಳಿಸಿದ ದೈಹಿಕ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಪೋಷಕರುಗಳಿಗೆ ಶಾಲಾ ಸಂಚಾಲಕರಾದ ರೆವರೆಂಡ್ ಫಾದರ್ ಅರುಣ್ ವಿಲ್ಸನ್ ಲೋಬೋ ಮತ್ತು ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಅಮಿತ್ ಪ್ರಕಾಶ್ ರೋಡ್ರಿಗಸ್ ಅಭಿನಂದಿಸಿದರು.

error: Content is protected !!
Scroll to Top