(ನ್ಯೂಸ್ ಕಡಬ) newskadaba.com ಕಡಬ, ಫೆ.26. ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಇತಿಹಾಸ ಪ್ರಸಿದ್ಧ ನೆಕ್ಕಿತ್ತಡ್ಕ ಮಖಾಂ ಉರೂಸ್ ಕಾರ್ಯಕ್ರಮವು ಇಂದಿನಿಂದ ಆರಂಭಗೊಂಡು ಮಾರ್ಚ್ 02 ರ ವರೆಗೆ ನಡೆಯಲಿದೆ.
ಇಂದು (ಫೆಬ್ರವರಿ 26) ನೆಕ್ಕಿತ್ತಡ್ಕ ದರ್ಗಾ ವಠಾರದಲ್ಲಿ ಉರೂಸ್ ಸಮಿತಿಯ ಅಧ್ಯಕ್ಷರಾದ ಯೂನುಸ್ ಝೂಬಿ ಗೋಲ್ಡ್ ಧ್ವಜಾರೋಹಣಗೈಯುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಲ್ಹಾಜ್ ಸಿ.ಕೆ. ಸಿದ್ದೀಕ್ ಸಖಾಫಿ, ಜುಮಾ ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಮದನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ಶಾಹುಲ್ ಹಮೀದ್ ತಂಙಳ್ ಮರ್ಧಾಳ ಅವರಿಂದ ದುವಾಃ ನಡೆಯಿತು.
ಐದು ದಿನಗಳ ಕಾಲ ಮತ ಪ್ರಭಾಷಣ ಜರಗಲಿದ್ದು, ಇಂದು ಬಹು| ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟನೆ ಹಾಗೂ ಕೂಟು ಝಿಯಾರತ್ ಗೆ ನೇತೃತ್ವ ನೀಡಲಿದ್ದು, ಬಹು| ಅಬ್ದುಸ್ಸಲಾಂ ಮದನಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಫೆಬ್ರವರಿ 27 ಸೋಮವಾರ ರಾತ್ರಿ ಬಹು ಹಝ್ರತ್ ಫಾಝಿಲ್ ರಝ್ವಿ ಕಾವಲ್ ಕಟ್ಟೆ ದುವಾಃ ನೆರವೇರಿಸಲಿದ್ದು, ಬಹು ಅನ್ಸಾರ್ ಫೈಝಿ ಅಲ್ ಬುರ್ಹಾನಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಫೆಬ್ರವರಿ 28 ಮಂಗಳವಾರ ರಾತ್ರಿ ಬಹು| ಶುಕ್ಊರ್ ಇರ್ಫಾನಿ ಕೇರಳ ಬುರ್ದಾ ಆಲಾಪನೆ ನಡೆಸಲಿದ್ದು, ನೆರವೇರಿಸಲಿದ್ದು, ಬಹು ರವೂಫ್ ಅಝ್ಹರಿ ಆಕೋಡ್ ಇಶಲ್ ವಿರುನ್ನು ಹಾಗೂ ಮಾ| ಅಹಮದ್ ಶಿಹಾನ್ ಉಳ್ಳಾಲ ನ’ಅತೇ ಶರೀಫ್ ನಡೆಸಿಕೊಡಲಿದ್ದಾರೆ.
ಮಾರ್ಚ್ 1 ಬುಧವಾರ ರಾತ್ರಿ ಬಹು| ಅಸ್ಸಯ್ಯಿದ್ ಕೆ.ಎಸ್.ಶಾಹುಲ್ ಹಮೀದ್ ತಂಙಳ್ ರವರ ದುವಾಃದೊಂದಿಗೆ ಬಹು| ಅಬ್ದುಸ್ಸಮದ್ ಸಖಾಫಿ ಮಯನಾಡ್ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಮಾರ್ಚ್ 11 ಗುರುವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಹು| ಮಶ್’ಹೂರ್ ಮುಲ್ಲಕೋಯ ತಂಙಳ್ ದುವಾಃ ನೆರವೇರಿಸಲಿದ್ದಾರೆ. ಬಹು| ಅಬ್ದುಸ್ಸಲಾಂ ಮದನಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಬಹು| ಪೇರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಭಾಷಣಗೈಯಲಿದ್ದಾರೆ ಎಂದು ಉರೂಸ್ ಸಮಿತಿಯ ಪ್ರಕಟಣೆ ತಿಳಿಸಿದೆ.