➤ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ ➤ ಅತ್ತೆಯನ್ನೇ ಕೊಂದ ಅಳಿಯ

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.25. ಬೆಂಗಳೂರು ಅಳಿಯನೊಬ್ಬ ತನ್ನ ಅತ್ತೆಯನ್ನೇ ಕೊಲೆ ಮಾಡಿರೋ ಘಟನೆ ಕೆಂಗೇರಿ ಬಳಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್ ನಲ್ಲಿ ನಡೆದಿದೆ.

ದಿವಾಕರ್ ಗೆ ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಇತ್ತು. ಆರೋಪಿ ದಿವಾಕರ್ ಮತ್ತು ಪತ್ನಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಆರೋಪಿ ತನ್ನ ಮಗುವನ್ನು ಆತನ ತಾಯಿ ಮನೆಗೆ ಕರೆದುಕೊಂಡು ಹೋಗಿದ್ದ, ಈ ವೇಳೆ ಮೃತ ಅತ್ತೆ ಏಳಲ್ ಅರಸಿ ಮಗುವಿಗೆ ಎಕ್ಸಾಂ ಇದೆ ಕಳುಹಿಸಿಕೊಡುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ದಿವಾಕರ್ ಅತ್ತೆ ಏಳಲ್ ಅರಸಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಏಳಲ್ ಅರಸಿ ಸಾವನ್ನಪ್ಪಿದ್ದು, ಅಳಿಯ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

Also Read  ಆಟೋ ರಿಕ್ಷಾ ಢಿಕ್ಕಿ ಹೊಡೆದು ಗರ್ಭಿಣಿ ಮೃತ್ಯು

error: Content is protected !!
Scroll to Top