ಬಿಳಿನೆಲೆ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿ ➤ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com. ಕಡಬ. ಫೆ.25.  ರಸ್ತೆ ದಾಟುತ್ತಿದ್ದ ವೇಳೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ  ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡಿರುವ ಘಟನೆ  ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿ ನಡೆದಿದೆ.  ಬಿಳಿನೆಲೆ ಗ್ರಾಮದ ವಾಲ್ತಾಜೆ ನಿವಾಸಿ ಬಾಲಕೃಷ್ಣ (49ವ.) ಗಾಯಗೊಂಡವರು.  ಬಾಲಕೃಷ್ಣ ಹಾಗೂ ಅವರ ಪತ್ನಿ ನೆಟ್ಟಣ ಪೇಟೆಗೆ ಬಂದವರು ದಿನಸಿ ಸಾಮಾನು ಖರೀದಿಸಿ ವಾಪಾಸು ವಾಲ್ತಾಜೆ ಮನೆಯ ಕಡೆಗೆ ಹೋಗಲೆಂದು ನೆಟ್ಟಣ ಪೇಟೆಯ ಗಾರ್ಮೆಂಟ್ ಶಾಪೊಂದರ ಎದುರುಗಡೆ ರಸ್ತೆ ದಾಟುತ್ತಿರುವ ಸಂದರ್ಭ ಕಡಬ ಕಡೆಯಿಂದ ಬಂದ ಟಾಟಾ ಏಸ್ ವಾಹನ ಡಿಕ್ಕಿಯಾಗಿದೆ.

Also Read  ಕೋಳಿ ಫಾರ್ಮ್ ನಲ್ಲಿ ಮಲಗಿದ್ದ ನಾಲ್ವರು ಶವವಾಗಿ ಪತ್ತೆ..!

ಡಿಕ್ಕಿಯಿಂದಾಗಿ ಬಾಲಕೃಷ್ಣರವರು ರಸ್ತೆಯ ಬದಿಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದರು.  ಕೂಡಲೇ ಅವರನ್ನು ಸ್ಥಳೀಯರು  ಖಾಸಗಿ ವಾಹನದಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್‌ನಲ್ಲಿ ಪುತ್ತೂರು ಸಕರಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ . ಚಾಲಕನ  ನಿರ್ಲಕ್ಷ್ಯತನದಿಂದ ಈ ಘಟನೆ ನಡೆದಿದ್ದು,  ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top